ಕಾಸರಗೋಡು: ವಾರ್ತಾ ಪ್ರಚಾರ ಇಲಾಖೆ ಕಾಸರಗೋಡು ಜಿಲ್ಲಾ ಮಾಹಿತಿ ಕಛೇರಿಯು ಕ್ಷೇತ್ರ ಪ್ರಚಾರ ವೃತ್ತಿ ಮಾರ್ಗದರ್ಶನ ಚಟುವಟಿಕೆಗಳ ಅಂಗವಾಗಿ ಛಾಯಾಗ್ರಹಣ ವೀಡಿಯೋಗ್ರಫಿಯನ್ನು ವೃತ್ತಿ ಕ್ಷೇತ್ರವನ್ನಾಗಿ ಅಳವಡಿಸಿಕೊಳ್ಳುವವರಿಗೆ ಫೆÇೀಟೋಗ್ರಫಿ ವಿಡಿಯೋಗ್ರಫಿ ಕಾರ್ಯಾಗಾರವನ್ನು ನಡೆಸಿತು.
ಕಾಸರಗೋಡು ಕಲೆಕ್ಟರೇಟ್‍ನಲ್ಲಿರುವ ಜಿಲ್ಲಾ ಮಾಹಿತಿ ಕಛೇರಿ ಪಿಆರ್ ಚೇಂಬರ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಉದ್ಘಾಟಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಹಿರಿಯ ಛಾಯಾಗ್ರಾಹಕ ವಿನಯರಾಜ ಶೆಟ್ಟಿ, ರಾಜ್ಯ ಛಾಯಾಗ್ರಹಣ ಪ್ರಶಸ್ತಿ ಪುರಸ್ಕøತ ಅನಿಲ್ ಐ ಫೆÇೀಕಸ್ ಹಾಗೂ ನಿವೃತ್ತ ಛಾಯಾಗ್ರಾಹಕ ಪಿ.ಮುಸ್ತಫಾ ಅವರನ್ನು ಜಿಲ್ಲಾಧಿಕಾರಿಗಳು ಗೌರವಿಸಿದರು.
ಹಿರಿಯ ಛಾಯಾಚಿತ್ರ ಪತ್ರಕರ್ತ ಪಿ.ಮುಸ್ತಫಾ ಅವರು ಸುದ್ದಿ ಛಾಯಾಗ್ರಹಣ ವೃತ್ತಿ ಬದಲಾಗುತ್ತಿರುವ ಕುರಿತು ತರಗತಿ ತೆಗೆದುಕೊಂಡರು. ಪಿ.ಮುಸ್ತಫಾ ಕಾಲಾಂತರದಲ್ಲಿ ಸ್ತಬ್ಧಚಿತ್ರಗಳಲ್ಲಿ ಬದಲಾಗುತ್ತಿರುವ ಪ್ರವೃತ್ತಿ ಮತ್ತು ಛಾಯಾಗ್ರಾಹಕರು ಪ್ರತಿ ಕ್ಷಣವೂ ತೆಗೆದುಕೊಳ್ಳಬೇಕಾದ ಸಿದ್ಧತೆ ಮತ್ತು ಜಾಗರೂಕತೆಯನ್ನು ವಿವರಿಸಿದರು. ದೂರದರ್ಶನ ವಾರ್ತೆ ಕುರಿತು ಶೈಜು ಪಿಲತ್ತಾರ ತರಗತಿ ತೆಗೆದುಕೊಂಡರು. ಚಿತ್ರಮಂದಿರದ ಸಂಚಾಲಕ ಟಿ.ಕೆ.ಕೃಷ್ಣನ್ ಸ್ವಾಗತಿಸಿ, ಗುಮಾಸ್ತ ಕೆ.ಪ್ರಸೀತಾ ವಂದಿಸಿದರು.



