ಕಾಸರಗೋಡು: ತಾಜ್ಯ ಸಂಸ್ಕರಣೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆಯನ್ನು ಕಂಡುಹಿಡಿಯಲು ರಚಿಸಲಾದ ಸ್ಕ್ಯಾಡ್ ಚೆರ್ಕಳ ಪೇಟೆಯಲ್ಲಿ ತಪಾಸಣೆ ನಡೆಸಿತು.
ವಿವಿಧ ಅಂಗಡಿಗಳಿಂದ 150ಕಿಲೋ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಸಮೀಪದ ಮಾಂಸ ಅಂಗಡಿಯಿಂದ ಹಳಸಿದ ಮಾಂಸವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಪಾಸಣೆ ಮುಂದುವರಿಯಲಿದೆ. ಜಿಲ್ಲಾ ಶುಚಿತ್ವ ಮಿಷನ್ ಎನ್ಫೋಸ್ಮೆರ್ಂಟ್ ಆಫೀಸರ್ ನ ನೇತೃತ್ವದಲ್ಲಿ ಪೆÇೀಲೀಸ್ ಅಧಿಕಾರಿ, ಚೆಂಗಳ ಗ್ರಾಮ ಪಂಚಾಯತ್ ಆರೋಗ್ಯ ವಿಭಾಗದ ಅಧಕಾರಿಗಳು, ಇಂಟರ್ನಲ್ ವಿಜಿಲೆನ್ಸ್ ವಿಭಾಗದ ಅಧಕಾರಿಗಳು, ಜಿಲ್ಲಾ ಜಾಯಿಂಟ್ ಡೈರೆಕ್ಟರ್ ನ ಕಾರ್ಯಾಲಯದ ಅಧಿಕಾರಿಗಳು ಸೇರಿ ತಪಾಸಣೆ ನಡೆಸಿದರು.



