ತಿರುವನಂತಪುರಂ: ರಾಜ್ಯದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 4263 ಕೋಟಿ ರೂಪಾಯಿ ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರ ಸಾಲದ ಮಿತಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಿತ್ತು. ಆದರೆ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗಾಗಿ 4000 ಕೋಟಿ ಸಾಲ ಪಡೆಯಲು ರಾಜ್ಯಕ್ಕೆ ಅವಕಾಶ ನೀಡಲಾಗಿದೆ.
ಸರ್ಕಾರ ಖಜಾನೆಯಲ್ಲಿ ಬಿಲ್ ವಿನಿಮಯಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ.ಈ ಆರ್ಥಿಕ ವರ್ಷ ಅಂತ್ಯಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಖಜಾನೆಗಳು ಇನ್ನೂ ಬಿಲ್‍ಗಳನ್ನು ವಿನಿಮಯ ಮಾಡಿಕೊಳ್ಳುವ ಧಾವಂತದಲ್ಲಿವೆ.
ಸರಕಾರ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಮಾರ್ಚ್ ತಿಂಗಳ ಸಂಬಳ. ಸರ್ಕಾರ ವಿಧಿಸಿರುವ ಎಲ್ಲಾ ಹೊಸ ತೆರಿಗೆಗಳು ಏಪ್ರಿಲ್ 1 ರ ನಂತರವೇ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ಮುಂಬರುವ ತಿಂಗಳ ವೇತನ ಪಾವತಿ ಸೇರಿದಂತೆ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.
ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ: 4363 ಕೋಟಿ ಹೆಚ್ಚು ಸಾಲ ಪಡೆಯಲು ತೀರ್ಮಾನ
0
ಮಾರ್ಚ್ 28, 2023


