ಬದಿಯಡ್ಕ: ವಿಷಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸಾವನ್ನಪ್ಪಿದ್ದಾಳೆ. ಕುಂಬ್ಡಾಜೆ ಕಜೆ ಕರಕ್ಕಾಡ್ ಪರಿಶಿಷ್ಟ ಜಾತಿ ಕಾಲೋನಿಯ ನಾರಾಯಣ-ಲಲಿತಾ ದಂಪತಿಯ ಪುತ್ರಿ, ಯುವ ಕವಯಿತ್ರಿ ಶ್ವೇತಾ ಕಜೆ (26) ಮೃತರು. ಬದಿಯಡ್ಕದ ಖಾಸಗಿ ವ್ಯಾಪರ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದ ಶ್ವೇತಾ ಮೊನ್ನೆ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದರು. ಮೊದಲಿಗೆ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸ್ಥಿತಿ ಗಂಭೀರವಾದ ಕಾರಣ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ನಿನ್ನೆ ರಾತ್ರಿ ವೇಳೆ ಮೃತರಾದರು. ಮೃತರು ಶ್ವೇತೇಶ, ಶ್ವೇತಾಕ್ಷಿ ಮತ್ತು ಶ್ರೇಯಸ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಯುವ ಬರಹಗಾರ್ತಿಯಾಗಿದ್ದ ಶ್ವೇತಾ ಕಜೆ ಕನ್ನಡ, ತುಳು ಭಾಷೆಗಳಲ್ಲಿ ಅನೇಕ ಸಾಹಿತ್ಯಗಳನ್ನು ರಚಿಸಿದ್ದಾರೆ. ಕಥೆ, ಕವನಗಳ ಮೂಲಕ ಹೆಚ್ಚು ಜನಪ್ರಿಯರಾಗಿದ್ದ ಅವರು ತಮ್ಮ ವಿಶೇಷ ಬರಹ ಶೈಲಿಯ ಮೂಲಕ ಗಮನ ಸೆಳೆದಿದ್ದರು.
ವಿಷ ಸೇವಿಸಿ ಯುವ ಬರಹಗಾರ್ತಿ ಆತ್ಮಹತ್ಯೆ
0
ಮಾರ್ಚ್ 28, 2023


