ಕಾಸರಗೋಡು: ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯು ಕಾಸರಗೋಡು ಜಿಲ್ಲಾ ಮಾಹಿತಿ ಕಛೇರಿಯ ನೇತೃತ್ವದಲ್ಲಿ ನವಕೇರಳ ಯೋಜನೆಯ ಸಹಯೋಗದೊಂದಿಗೆ ಕಾರ್ಯಾಗಾರ ಕಾಸರಗೋಡಿನಲ್ಲಿ ಜರುಗಿತು. ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಯೋಜನಾ ಸಮಿತಿ ಕಾರ್ಯಕರ್ತರಿಗಾಗಿ ಶಿಬಿರ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ ಮಾತನಾಡಿ, ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಅಭಿವೃದ್ಧಿಯ ಪಥ ತಾನಾಗಿ ತೆರೆದುಕೊಳ್ಳುವುದು. ಉತ್ತಮ ಯೋಜನೆಗಳನ್ನು ರೂಪೀಕರಿಸಲು ಏಕೀಕರಣದ ಪ್ರಯೋಜನವನ್ನು ಪಡೆಯಲು ನಮಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮುಖ್ಯ ಅತಿಥಿಯಾಗಿದ್ದರು. ತ್ಯಾಜ್ಯ ನಿರ್ವಹಣೆಯನ್ನು ಸಕಾಲದಲ್ಲಿ ಸ್ಥಳೀಯಾಡಳಿತ ಸರಕಾರಗಳು ನಿರ್ವಹಿಸಬೇಕು ಕರ್ತವ್ಯ ಲೋಪ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸ್ಥಳೀಯಾಡಳಿತ ಸಂಸ್ಥೆಯ ಸಹನಿರ್ದೇಶಕ ಜೇಸನ್ ಮಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಿತ ಸಾಧ್ಯತೆಗಳು ಎಂಬ ವಿಷಯದ ಕುರಿತು ಜಿಲ್ಲಾ ಯೋಜನಾಧಿಕಾರಿ ಎ. ಎಸ್. ಮಾಯಾ, ಕಸಮುಕ್ತ ಅಭಿಯಾನ ಎಂಬ ವಿಷಯದ ಕುರಿತು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ. ಪಿ. ರಾಜ್ ಮೋಹನ್, ಶುಚಿತ್ವ ಮಿಷನ್ ಸಂಯೋಜಕಿ ಎ. ಲಕ್ಷ್ಮಿ, ಜಿಲ್ಲಾ ಶುಚಿತ್ವ ಮಿಷನ್ ಕಾರ್ಯಕ್ರಮ ಅಧಿಕಾರಿ ಕೆ ವಿ ರಂಜಿತ್ ತರಗತಿ ನಡೆಸಿದರು.
ನೀರಿನ ಮಾಸ್ಟರ್ ಪ್ಲಾನ್ ತಯಾರಿಯ ವಿಷಯದ ಬಗ್ಗೆ ಎಮ್ ಜಿ ಎನ್ ಆರ್ ಇ ಜಿ ಜಂಟಿ ಕಾರ್ಯಕ್ರಮ ಸಂಯೋಜಕ ಅಧಿಕಾರಿ ಕೆ. ಪ್ರದೀಪನ್, ಲೈಫ್ ಎಂಬ ವಿಷಯದ ಬಗ್ಗೆ ಲೈಫ್ ಜಿಲ್ಲಾ ಸಂಯೋಜಕರಾದ ಅನೀಶ್ ಜೆ. ಅಲೈಕ್ಕಾ ಪಳ್ಳಿ, ಜಲ ಬಜೆಟ್ ನಿಂದ ಜಲ ಸುರಕ್ಷಾ ಯೋಜನೆಗೆ ಎಂಬ ವಿಷಯದ ಬಗ್ಗೆ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಿ ಎಲ್ ಟಿ ಸಿ ಸಂಚಾಲಕ ಕಾಞಂಗಾಡ್ ಎ. ಪಿ. ಸುಧಾಕರನ್ ಹಸಿರು ಕೇರಳ ಮಿಷನ್ ಮುಂದುವರಿಕೆ ಚಟುವಟಿಕೆಗಳ ಕುರಿತು ಹಸಿರು ಕೇರಳ ಮಿಷನ್ ಜಿಲ್ಲಾ ಕೊ-ಆರ್ಡಿನೇಟರ್ ಕೆ.ಬಾಲಕೃಷ್ಣನ್, ಸ್ವಚ್ಛ ಸಾರ್ವಜನಿಕ ಸಂಸ್ಥೆಗಳು, ಗ್ರೇಡಿಂಗ್ ಹಸಿರು ಕ್ರಿಯಾಸೇನೆ ಎಂಬ ವಿಷಯದ ಕುರಿತು ಎಲ್ ಎಸ್ ಜಿ ಡಿ ಡೆಪ್ಯೂಟಿ ಡೈರೆಕ್ಟರ್ ಕೆ. ವಿ. ಹರಿದಾಸ್ ತರಗತಿ ನಡೆಸಿದರು. ಉಪ ಜಿಲ್ಲಾ ಯೋಜನಾಧಿಕಾರಿ ನೆನೋಜ್ ಮೆಪ್ಪಾಟಿಯತ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿದರು. ನವಕೇರಳ ಕರ್ಮಪದ್ಧತಿ ಸಂಪನ್ಮೂಲ ವ್ಯಕ್ತಿ ಕೆ. ಕೆ. ರಾಘವನ್ ವಂದಿಸಿದರು.
ತ್ಯಾಜ್ಯ ಮುಕ್ತ ಜಿಲ್ಲೆಗಾಗಿ ನವಕೇರಳ ಏಕ ದಿನ ಕಾರ್ಯಾಗಾರ
0
ಮಾರ್ಚ್ 26, 2023
Tags





