ಕಾಸರಗೋಡು: ಆಫ್ರಿಕನ್ ಹಂದಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಹಂದಿಗಳನ್ನು ಸಾಮೂಹಿಕವಾಗಿ ಹತ್ಯೆಮಾಡಿರುವುದರಿಂದ ನಷ್ಟಕ್ಕೊಳಗಾಗಿರುವ ಎಣ್ಮಕಜೆ ಪಂಚಾಯಿತಿಯ ಬಾಳೆಮೂಲೆ ಹಂದಿಫಾರ್ಮ್ ಮಾಲಿಕಗೆ ಪರಿಹಾರ ಮೊತ್ತವನ್ನು ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ಸಚಿವ ಜೆ. ಚಿಂಚುರಾಣಿ ಹಸ್ತಾಂತರಿಸಿದರು. ರಾಯಲ್ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಷ್ಟಪರಿಹಾರ ವಿತರಿಸಲಾಯಿತು. ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.
ಪಶು ಕಲ್ಯಾಣ ಇಲಾಖೆಯ ಕಾರ್ಪಸ್ ನಿಧಿಯಿಂದ 30.82 ಲಕ್ಷ ವಿತರಿಸಲಾಗಿದೆ. ಹಂದಿ ಜ್ವರ ದೃಢಪಟ್ಟ ನಂತರ ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ಪ್ರಕಾರ ಬಾಳೆಮೂಲೆಯ ಫಾರ್ಮ್ ಒಂದರ 494 ಹಂದಿಗಳನ್ನು ಸಾಮೂಹಿಕವಾಗಿ ಹತ್ಯೆನಡೆಸಿ ವೈಜ್ಞಾನಿಕ ರಈತಿಯಲ್ಲಿ ಸಂಸ್ಕರಿಸಲಾಗಿತ್ತು.
ರೋಗ ನಿಯಂತ್ರಣದ ಅಂಗವಾಗಿ ಹಂದಿಗಳನ್ನು ಕೊಂದು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಸೋಂಕುರಹಿತಗೊಳಿಸುವಲ್ಲಿ ಮುಂದಾಳತ್ವ ವಹಿಸಿದ ಪಶು ಕಲ್ಯಾಣ ಇಲಾಖೆ ಕ್ಷಿಪ್ರ ಕಾರ್ಯಪಡೆಯ ಸದಸ್ಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ, ಪಶು ರೋಗ ನಿಯಂತ್ರಣ ಇಲಾಖೆ ಜಿಲ್ಲಾ ಸಂಯೋಜಕ ಡಾ.ಎಸ್.ಮಂಜು, ಮುಖ್ಯ ಪಶುವೈದ್ಯಾಧಿಕಾರಿ ಡಾ.ಜಯಪ್ರಕಾಶ್, ಪ್ರಾದೇಶಿಕ ಪಶು ಆಶ್ರಯದ ಸಹಾಯಕ ಯೋಜನಾಧಿಕಾರಿಗಳಾದ ಡಾ.ಅಬ್ದುಲ್ ವಾಹಿದ್, ಡಾ.ಜಿ.ಕೆ.ಮಹೇಶ್, ಡಾ.ಶ್ರೀವಿದ್ಯಾ ನಂಬಿಯಾರ್, ಆರ್‍ಆರ್‍ಟಿ ಮುಖ್ಯಸ್ಥಡಾ.ವಿ.ವಿ.ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಮೃಗ ಸಂರಕ್ಷಣಾಧಿಕಾರಿ ಡಾ.ಬಿ.ಸುರೇಶ್ ಸ್ವಾಗತಿಸಿದರು. ಜಿಲ್ಲಾ ಪಶುವೈದ್ಯಕೀಯ ಕೇಂದ್ರದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಎ.ಮುರಳೀಧರನ್ ವಂದಿಸಿದರು.
ಆಫ್ರಿಕನ್ ಹಂದಿಜ್ವರ-ಸಾಮೂಹಿಕ ಹತ್ಯೆಯಿಂದ ನಷ್ಟಕ್ಕೊಳಗಾದವರಿಗೆ ಪರಿಹಾರ ಚೆಕ್ ಹಸ್ತಾಂತರ
0
ಮಾರ್ಚ್ 26, 2023
Tags





