ಕಾಸರಗೋಡು: ಬೇಸಿಗೆಯ ಬೇಗೆಯಿಂದ ನರಳುತ್ತಿರುವ ಪಕ್ಷಿಗಳಿಗೆ ಹೊಸದುರ್ಗ ಜಿಲ್ಲಾ ಕಾರಾಗೃಹದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೈಲಿನ ವಿವಿಧೆಡೆ ಸುಮಾರು 15 ಮಣ್ಣಿನ ಮಡಕೆಗಳಲ್ಲಿ ಪಕ್ಷಿಗಳಿಗೆ ನೀರು ಸಿದ್ಧಪಡಿಸಿಡಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್ ಯೋಜನೆ ಉದ್ಘಾಟಿಸಿದರು. ಹೊಸದುರ್ಗ ಜಿಲ್ಲಾ ಕಾರಾಗೃಹ ಅಧೀಕ್ಷಕ ಕೆ. ವೇಣು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನವ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕಿಶನನ್, ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ಹೊಸದುರ್ಗ ಜಿಲ್ಲಾ ಕಾರಾಗೃಹ ಸಹಾಯಕ ಅಧೀಕ್ಷಕ ವಿ.ಎ.ನವಾಜ್ ಬಾಬು, ಮಹಿಳಾ ಸಹಾಯಕ ಅಧೀಕ್ಷಕಿ ಟಿ.ವಿ.ಸುಮಾ ಭಾಗವಹಿಸಿದ್ದರು.
ಜಿಲ್ಲಾ ಕಾರಾಗೃಹದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು ಸೌಲಭ್ಯ
0
ಮಾರ್ಚ್ 18, 2023


