ಬದಿಯಡ್ಕ: ಕೊಲ್ಲಂಗಾನ ಅನಂತಶ್ರೀಯ 6ನೇ ವಾರ್ಷಿಕೋತ್ಸವ ಇಂದು(ಮೇ.18) ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ಕ್ಕೆ ಗಣ ಹವನ, ದುರ್ಗಾಹೋಮ ನಡೆಯಲಿದೆ. 9.30 ಕ್ಕೆ ಬ್ರಹ್ಮಶ್ರೀ ಪದ್ಮನಾಭ ಬರ್ಲಾಯ ಬೊಳ್ಳಾರ್ ದೀಪ ಬೆಳಗಿಸಿ ಚಾಲನೆ ನೀಡುವರು. ಬಳಿಕ ಮಾನ್ಯದ ಶ್ರೀಶಾಸ್ತಾ ಭಜನಾ ಸಂಗದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ 12.30 ರಿಂದ ಮುರಳೀಕೃಷ್ಣ ನೀರ್ಚಾಲು ಮತ್ತು ಬಳಗದವರಿಂದ ಗಾನಸುಧೆ ಜರಗಲಿದೆ. ಅಪರಾಹ್ನ 2 ರಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸುವರು.
ಕೊಚ್ಚಿನ್ ಕನ್ನಡ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್, ನಿವೃತ್ತ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ, ನಿವೃತ್ತ ಡೆಪ್ಯುಟಿ ರಿಜಿಸ್ಟಾರ್ ಡಾ.ಎ.ಪಿ.ಕೃಷ್ಣ, ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್, ಪಾಡಿ ಅರಮನೆಯ ರಾಜ ಹರಿಪ್ರಸಾದ್ ವರ್ಮ, ನೀರ್ಚಾಲು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಧಾರ್ಮಿಕ, ಸಾಮಾಜಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ.ಜಯಪ್ರಕಾಶನಾರಾಯಣ, ಮಾರ್ಪನಡ್ಕ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ, ಕನ್ನಡಿಪಾರ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಗೋವಿಂದ ಭಟ್, ಪೆರಡಾಲ ಉದನೇಶ್ವರ ದೇವಾಲಯ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಅರ್ತಲೆ ರಕ್ತೇಶ್ವರಿ, ನಾಗ, ಗುಳಿಗ ಸೇವಾ ಸಮಿತಿ ಅಧ್ಯಕ್ಷ ಸುಬ್ಬಣ್ಣ ನಾಯ್ಕ್, ನಿವೃತ್ತ ಪ್ರಾಧ್ಯಾಪಕ ಡಾ.ಪ್ರಸನ್ನ ರೈ ಕಯ್ಯಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಶ್ರೀನಿಲಯ ಕೊಲ್ಲಂಗಾನ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಗಡಿನಾಡ ಸಾಹಿತ್ಯ, ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಪಿ, ಪುರೋಹಿತ ಸುರೇಶ ಶಿತ್ತಿಲ್ಲಾಯ ಉಪಸ್ಥಿತರಿರುವರು. ಈ ಸಂದರ್ಭ ವಿವಿಧ ವಲಯಗಳಲ್ಲಿ ಸಾಧನೆಗೈದ ಶತಾಯುಷಿ ಮೃದಂಗ ವಿದ್ವಾನ್ ಕೆ.ಬಾಬು ರೈ, ಚಂದ್ರಹಾಸ ನಂಬ್ಯಾರ್, ಟಿ.ಎಂ.ಶಹೀದ್, ವಾಮನ ರಾವ್ ಬೇಕಲ್, ಘಡ್ ಎ ಕಯ್ಯಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಅಪರಾಹ್ನ 3 ರಿಂದ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ವೆಂಕಟ ಭಟ್ ಎಡನೀರು ಅಧ್ಯಕ್ಷತೆ ವಹಿಸುವರು. ಸಂಜೆ 6 ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಾನ್ಯದ ಬಾಲಗೋಕುಲ ತಂಡದಿಂದ ಕುಣಿತ ಭಜನೆ, ಗಜಲಕ್ಷ್ಮೀ ತಂಡ ಬದಿಯಡ್ಕದವರಿಂದ ಕೈಕೊಟ್ಟು ಕಳಿ, ರಾತ್ರಿ 8 ರಿಂದ ಶ್ರೀದುರ್ಗಾಪೂಜೆ, ಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಸಾಂಸ್ಕøತಿಕ ಸಮ್ಮಿಲನ ಸಮಾರೋಪ ನಡೆಯಲಿದೆ.

