HEALTH TIPS

ಪಾಂಗೋಡು ಕ್ಷೇತ್ರದಲ್ಲಿ ಮಹಾ ಚಂಡಿಕಾ ಯಾಗ ಸಂಪನ್ನ, ಧಾರ್ಮಿಕ ಸಭೆ

            ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಮಹಾ ಚಂಡಿಕಾ ಯಾಗ ಶುಕ್ರವಾರ ಸಂಪನ್ನಗೊಂಡಿತು.  ಬೆಳಗ್ಗೆ ಪಾಂಗೋಡು ಕ್ಷೇತ್ರದ ಯಾಗಮಂಟಪ ವಠಾರದಲ್ಲಿ ಸ್ಥಳಶುದ್ಧಿಯೊಂದಿಗೆ ಯಾಗಪ್ರಕ್ರಿಯೆ ಆರಂಭಗೊಂಡಿತು. ನಮತರ ಸಾಮೂಹಿಕ ಪ್ರತ್ನೆ ನಡೆಯಿಯಿತು. ಚಂದ್ರಗಿರಿ ನದೀತಟದಿಂದ ಗಣ್ಯವ್ಯಕ್ತಿಗಳ ಆಗಮನದೊಂದಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರನ್ನು ಪೂರ್ಣಕುಂಭ ಸ್ವಾಗತ ದೊಂದಿಗೆ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು.   ಕಲ್ಪೋಕ್ತ ಹೋಮದೊಂದಿಗೆ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿ ನಡೆಯಿತು.

                  ಇ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಬದುಕಿನಲ್ಲಿ ಧರ್ಮವನ್ನು ಅಳವಡಿಸಿಕೊಂಡಾಗ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ. ಮನುಷ್ಯನಲ್ಲಿ ಇಚ್ಛಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಇದ್ದಲ್ಲಿ ಜೀವನ ಪಾವನವಾಗುವುದಾಗಿ ತಿಳಿಸಿದರು.  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ, ಹಿರಿಯ ಚಿಂತಕ, ಶಿಕ್ಷಣ ತಜ್ಞ ಪ್ರೊ. ಕೆ. ಇ. ರಾಧಾಕೃಷ್ಣ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೆ.ಎನ್ ವೆಂಕಟ್ರಮಣ ಹೊಳ್ಳ, ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಉದ್ಯಮಿ ಅರಿಬೈಲ್ ಗೋಪಾಲ ಶೆಟ್ಟಿ, ಪಮ್ಮಿ ಕೊಡಿಯಾಲಬೈಲ್, ಪ್ರೊ. ಎ.ಶ್ರೀನಾಥ್, ಎಸ್.ಎಲ್ ಭಾರದ್ವಜ್, ವಿ.ಬಿ ಕುಳಮರ್ವ ಮುಂತಾದವರು ಉಪಸ್ಥಿತರಿದ್ದರು. ವಾಮನ ರಾವ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು. Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries