ಕಾಸರಗೋಡು: ಯಕ್ಷಪುತ್ಥಳಿ ಬೊಂಬೆಮನೆ ಟ್ರಸ್ಟ್ ಕಾಸರಗೋಡು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಧಿಕಾರ ಬೆಂಗಳೂರು ಹಾಗೂ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ವತಿಯಿಂದ ಕಾಸರಗೋಡು ಪಿಲಿಕುಂಜೆಯ ಯಕ್ಷ ಪುತ್ಥಳಿ ಬೊಂಬೆ ಮನೆಯಲ್ಲಿ ಯಕ್ಷಗಾನದ ನೂತನ ಸೂತ್ರದ ಬೊಂಬೆಗಳ ಅನಾವರಣ ಕಾರ್ಯಕ್ರಮ ಮೇ 19ರಂದು ಬೆಳಗ್ಗೆ 9ಕ್ಕೆ ಜರುಗಲಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ನೂತನ ಬೊಂಬೆಗಳ ಅನಾವರಣಗೈಯುವರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ ಪಾಲ್ಗೊಳ್ಳುವರು. ಈ ಸಂದರ್ಭ ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅವರಿಗೆ ಯಕ್ಷಪುತ್ಥಳಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತರಬೇತಿ ಪಡೆದ ವಿದ್ಯಾರ್ಥಿಗಳಿಂದ 'ಮಹಿಷಮರ್ದಿನಿ'ಯಕ್ಷಗಾನ ಬೆಂಬೆಯಾಟ ನಡೆಯುವುದು.





