ಕಾಸರಗೋಡು: ಭಾಷ ಅಲ್ಪಸಂಖ್ಯಾತರಿಗೆ ಉದ್ಯೋಗ ಖಚಿತಪಡಿಸಲು ಲೋಕಸೇವಾ ಆಯೋಗ(ಪಿಎಸ್‍ಸಿ)ಏಳು ವರ್ಷಗಳಿಂದ ಸಿದ್ಧಪಡಿಸಿರುವ ಸಾಧ್ಯತಾ ಪಟ್ಟಿಯಲ್ಲಿ ಭಾರಿ ವಂಚನೆ ನಡೆದಿರುವುದಾಗಿ ಉದ್ಯೋಗಾರ್ಥಿಗಳು ಆರೋಪಿಸಿದ್ದಾರೆ.
2016ರಲ್ಲಿ ಕನ್ನಡ-ಮಲಯಾಳ ತಿಳಿದಿರುವ ಎಲ್‍ಡಿಸಿ ಹುದ್ದೆಗೆ ಪಿಎಸ್‍ಸಿ ಅರ್ಜಿ ಆಹ್ವಾನಿಸಿದ್ದು, 2021ರಲ್ಲಿ ಸಾಧ್ಯತಾ ಪಟ್ಟಿ ಪ್ರಕಟಿಸಿದೆ. 2021ರಲ್ಲಿ ತಯಾರಿಸಲಾದ ತಯಾರಿಸಲಾದ 98ಮಂದಿಯ ಸಾಧ್ಯತಾ ಪಟ್ಟಿಯಿಂದ 37ಜನರನ್ನು ಹೊರತುಪಡಿಸಿ ಪಟ್ಟಿ ತಯಾರಿಸುವ ಮೂಲಕ ಭಾಷಾ ಅಲ್ಪಸಂಖ್ಯಾತರಿಗೆ ಪ್ರಹಾರ ನೀಡಿದೆ. ರ್ಯಾಂಕ್ ಲಿಸ್ಟ್‍ಗಾಗಿ ಕಳೆದ ಏಳು ವರ್ಷಗಳಿಂದ ಕಾದು ನಿಂತಿರುವ ಉದ್ಯೋಗಾರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ.2021ರಲ್ಲಿ ಹೊರಡಿಸಲಾದ ಸಾಧ್ಯತಾ ಪಟ್ಟಿಯಲ್ಲಿದ್ದ ಹೆಸರು ಏಕಾಏಕಿ ನಾಪತ್ತೆಯಾಗಿದ್ದು, ಹೊಸಬರ ಹೆಸರು ಸೇರ್ಪಡೆಗೊಂಡಿರುವುದು ಉದ್ಯೋಗಾರ್ಥಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ.




