ಕಾಸರಗೋಡು: ಕೊಲ್ಲಂಗಾನ ಅನಂತಶ್ರೀಯ ಆರನೇ ವಾರ್ಷಿಕೋತ್ಸವ ಸಂದರ್ಭ ಹಿರಿಯ ಮೃದಂಗ ವಿದ್ವಾನ್ ಬಾಬು ರೈ ಸೇರಿದಂತೆ ವಿವಿಧ ವಲಯಗಳಲ್ಲಿ ಸಾಧನೆಗೈದ ಹಲವರನ್ನು ಸನ್ಮಾನ ಸಮಾರಂಭ ಗುರುವಾರ ಅನಂತಶ್ರೀಯಲ್ಲಿ ಜರುಗಿತು. ಶಾಸಕ ಎನ್.ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಗಣಹವನ, ದುರ್ಗಾಹೋಮ, ಬಜನಾ ಸಂಕೀರ್ತನೆ, ಬಹುಭಾಷಾ ಕವಿಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಾನ್ಯದ ಬಾಲಗೋಕುಲ ತಂಡದಿಂದ ಕುಣಿತ ಭಜನೆ, ಬದಿಯಡ್ಕದ ಗಜಲಕ್ಷ್ಮೀ ತಂಡದಿಂದ ಕೈಕೊಟ್ಟು ಕಳಿ, ನಂತರ ಶ್ರೀ ದುಗಾಪೂಜೆ, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.





