ಕಾಸರಗೋಡು: ಎಐವೈಎಫ್ ರಾಜ್ಯ ಸಮಿತಿ ವತಿಯಿಂದ 'ಸೇವ್ ಇಂಡಿಯಾ'ಮಾರ್ಚ್‍ಗೆ ಕಾಸರಗೋಡಿನಿಂದ ಬುಧವಾರ ಚಾಲನೆ ನೀಡಲಾಯಿತು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಸಿಪಿಐ ಮುಖಂಡ, ಸಂಸದ ಸಂತೋಷ್ ಕುಮಾರ್ ಉದ್ಘಾಟಿಸಿದರು.
ಎಐವೈಎಫ್ ರಾಜ್ಯ ಸಮಿತಿ ಅದ್ಯಕ್ಷ ಎನ್. ಅರುಣ್ ಉತ್ತರ ವಲಯದ ಜಾಥಾ ಮುನ್ನಡೆಸಲಿದ್ದಾರೆ. ಜಾಥಾ ಉಪನಾಯಕರಾದ ಕೆ. ಶಾಜಹಾನ್, ಪ್ರಸಾದ್ ಪರೇರಿ, ವಿನಿತಾ ವಿನ್ಸೆಂಟ್ ಉಪಸ್ಥಿತರಿದ್ದರು.





