ಕಾಸರಗೋಡು: ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ತ್ರಿಕರಿಪುರ ಮಂಡಲಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 4.51 ಕೋಟಿ ರೂ. ಪರಿಹಾರ ಮಂಜೂರುಗೊಳಿಸಲಾಗಿದೆ. 2021 ಮೇ 20ರಿಂದ 2023ರ ಏಪ್ರಿಲ್ 30ರವರೆಗೆ ಕ್ಷೇತ್ರದಿಂದ ಒಟ್ಟು 2639 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ವಾರ್ಷಿಕ ಆದಾಯ ಎರಡು ಲಕ್ಷಕ್ಕಿಂತ ಕಡಿಮೆ ಇರುವ ಜನರಲ್ಲಿ ಕಂಡುಬರುವ ಮಾರಣಾಂತಿಕ ಕಾಯಿಲೆಗಳ ವೈದ್ಯಕೀಯ ನೆರವು, ಅಪಘಾತದಿಂದ ಸಾವನ್ನಪ್ಪಿದ ಸಂತ್ರಸ್ತರಿಗೆ ತುರ್ತು ಧನಸಹಾಯ ಮತ್ತು ಸಣ್ಣ ಹಣಕಾಸಿನ ನೆರವು, ಬೆಂಕಿ, ಸಿಡಿಲು ಮತ್ತು ಬಿರುಗಾಳಿ ಮುಂತಾದ ಪ್ರಕೃತಿಕ ವಿಕೋಪಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಈ ಮೊತ್ತ ವನ್ನುಪರಿಹಾರವಗಿ ನೀಡಲಾಗಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನಿರ್ಗತಿಕರಿಗೆ ವಿವಿಧ ಪಂಚಾಯಿತಿಗಳಿಗೆ ಪರಿಹಾರ ಮಂಜೂರುಗೊಳಿಸಲಾಗಿದೆ. ಕಯ್ಯೂರುಚೀಮೇನಿ ಗ್ರಾಮ ಪಂಚಾಯಿತಿಗೆ 41.38 ಲಕ್ಷ, ಪಿಲಿಕೋಡ್ ಗ್ರಾಮ ಪಂಚಾಯಿತಿಗೆ 35.92 ಲಕ್ಷ, ಚೆರುವತ್ತೂರು ಗ್ರಾಮ ಪಂಚಾಯಿತಿಗೆ 45.14 ಲಕ್ಷ, ಪಡನ್ನ ಗ್ರಾಮ ಪಂಚಾಯಿತಿಗೆ 78.75 ಲಕ್ಷ, ನೀಲೇಶ್ವರ ನಗರಸಭೆಗೆ 51.05ಲಕ್ಷ, ತ್ರಿಕ್ಕರಿಪುರ ಗ್ರಾಮ ಪಂಚಾಯಿತಿಗೆ 78.14ಲಕ್ಷ, ವಲಿಯಪರಂ ಪಂಚಾಯಿತಿ 62.46 ಲಕ್ಷ, ಈಸ್ಟ್ ಎಳೇರಿ ಗ್ರಾಮ ಪಂಚಾಯಿತಿಗೆ 22.40ಲಕ್ಷ ರೂ. ಮಂಜೂರುಗೊಲಿಸಲಗಿದೆ.




