HEALTH TIPS

ನಿಷೇಧದ ನಂತರವೂ ಪಾಪ್ಯುಲರ್ ಫ್ರಂಟ್ ಕೇರಳದಲ್ಲಿ ಸಕ್ರಿಯ: ಹಿಟ್ ಸ್ಕ್ವಾಡ್ ನಲ್ಲಿ ಯುವಕರು; ಗಮನ ಹರಿಸದ ಕೇರಳ ಪೊಲೀಸರು; ತನಿಖೆ ತೀವ್ರಗೊಳಿಸಿದ ಎನ್‍ಐಎ

             ಕೊಚ್ಚಿ: ನಿಷೇಧÀ ನಂತರವೂ ಪಿಎಫ್‍ಐ ಕೇರಳದಲ್ಲಿ ಹಿಟ್ ಸ್ಕ್ವಾಡ್‍ಗಳನ್ನು ಸಕ್ರಿಯಗೊಳಿಸಿದೆ. ಹಿಟ್ಸ್ ಸ್ಕ್ವಾಡ್‍ಗಳು ಧಾರ್ಮಿಕ ಭಯೋತ್ಪಾದನೆಗೆ ಆಕರ್ಷಿತರಾದ ಯುವಕರ ಗುಂಪುಗಳಾಗಿವೆ.

           ರಹಸ್ಯ ಸಭೆಗಳು ಮತ್ತು ತರಬೇತಿಗಳು ನಡೆಯುವ ಸ್ಥಳಗಳನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿವೆ. ಹಿಟ್ ಸ್ಕ್ವಾಡ್ ಸದಸ್ಯರಿಗೆ ತರಬೇತಿ ನೀಡಿದ ಮುಹಮ್ಮದ್ ಮುಬಾರಕ್ ಕೇಂದ್ರವಾದ ಎಡವನಕ್ಕಾಡ್, ಪಿಎಫ್‍ಐ ಭದ್ರಕೋಟೆಯಾದ ಆಲುವಾ ಕುಂಜುನ್ನಿಕರ ಮತ್ತು ಪಿಎಫ್‍ಐ ಪ್ರಭಾವ ಕೇಂದ್ರವಾಗಿರುವ ಎರ್ನಾಕುಳಂನ ಪೆರುಂಬವೂರ್ ಮತ್ತು ಕೋದಮಂಗಲಂ ಪ್ರದೇಶಗಳಲ್ಲಿ ಪಿಎಫ್‍ಐ ನಿಷೇಧದ ನಂತರ ಹಲವು ರಹಸ್ಯ ಸಭೆಗಳನ್ನು ಆಯೋಜಿಸಲಾಗಿದೆ ಎಂದು ವರದಿಯಾಗಿದೆ. 

          ನಿಷೇಧದ ನಂತರ ಕೇರಳ ಪೊಲೀಸರು ಈ ವಿಷಯದಲ್ಲಿ ತೋರಿದ ನಿರಾಸಕ್ತಿ ಸಂಘಟನೆಯ ರಹಸ್ಯ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಸಂಘಟನೆಯ ಮೂರು ಮತ್ತು ನಾಲ್ಕನೇ ಹಂತದ ನಾಯಕರು ಕೇರಳದ ವಿವಿಧ ಭಾಗಗಳಲ್ಲಿ ರಹಸ್ಯ ಸಭೆಗಳನ್ನು ನಡೆಸಿದರು. ಆದರೆ ಕೇರಳ ಪೆÇಲೀಸರು ಇದನ್ನು ಪತ್ತೆ ಮಾಡುವತ್ತ ಅಥವಾ ಅವರನ್ನು ಬಂಧಿಸುವತ್ತ ಗಮನ ಹರಿಸಿಲ್ಲ. ಪಾಪ್ಯುಲರ್ ಫ್ರಂಟ್ ದೇಶವಿರೋಧಿ-ಹತ್ಯೆ ಪ್ರಕರಣಗಳಲ್ಲಿ ಬಂಧಿತನಾಗಿದ್ದ ಜಹೀರ್ ನನ್ನು ವಿಚಾರಣೆಗೊಳಪಡಿಸುವ ಮೂಲಕ ಹಿಟ್ ಸ್ಕ್ವಾಡ್ ಗಳು ಸಕ್ರಿಯವಾಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮಾಹಿತಿ ಸಿಕ್ಕಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನಷ್ಟು ಆರೋಪಿಗಳಿಗಾಗಿ ಎನ್‍ಐಎ ಶೋಧ ಕಾರ್ಯವನ್ನು ತೀವ್ರಗೊಳಿಸಿದೆ.

          ರಾಷ್ಟ್ರೀಯ ರಾಜಕೀಯ ಚಳುವಳಿಗಳ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಲು ಪಿ.ಎಫ್.ಐ ನಿಂದ ಹಿಟ್ಸ್‍ಕ್ವಾಡ್‍ಗಳನ್ನು ರಚಿಸಲಾಗಿದೆ. ಪಾಲಕ್ಕಾಡ್‍ನಲ್ಲಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ಎ ಶ್ರೀನಿವಾಸನ್ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತ ನಂದು ಹತ್ಯೆ ಪ್ರಕರಣದಲ್ಲಿ ಆರೋಪಿಗಳೆಲ್ಲರೂ ಮಾರಕಾಸ್ತ್ರಗಳನ್ನು ಬಳಸುವಲ್ಲಿ ತರಬೇತಿ ಪಡೆದಿದ್ದರು. ಪಿಎಫ್‍ಐನ ಮುಖ್ಯ ಶಸ್ತ್ರಾಸ್ತ್ರ ತರಬೇತುದಾರ ಮೊಹಮ್ಮದ್ ಮುಬಾರಕ್ ಮತ್ತು ಹಿಟ್ ಸ್ಕ್ವಾಡ್ ಇನ್ಫಾರ್ಮರ್ ಮೊಹಮ್ಮದ್ ಸಾದಿಕ್ ಅವರ ವಿಚಾರಣೆಯಿಂದ ಎನ್‍ಐಎ ನಿರ್ಣಾಯಕ ಮಾಹಿತಿಯನ್ನು ಪಡೆದುಕೊಂಡಿದೆ.

        ಇದೇ ವೇಳೆ ಎ ಶ್ರೀನಿವಾಸನ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಪಾಲಕ್ಕಾಡ್ ನ ಪಟ್ಟಾಂಬಿ ನಿವಾಸಿ ಜಹೀರ್ ಎಂಬಾತನನ್ನು ಬಂಧಿಸಲಾಗಿದೆ. ಎನ್‍ಐಎ ಆತನನ್ನು ವಿವರವಾಗಿ ವಿಚಾರಣೆ ನಡೆಸುತ್ತಿದೆ. ಜಹೀರ್‍ನಿಂದ ಪಡೆದ ಮಾಹಿತಿಯ ಪ್ರಕಾರ, ಪಿಎಫ್‍ಐ ಹಿಟ್ ಸ್ಕ್ವಾಡ್‍ಗಳನ್ನು ಸಕ್ರಿಯವಾಗಿರಿಸಿಕೊಳ್ಳುತ್ತಿದೆ. ಜಹೀರ್‍ನ ಕಸ್ಟಡಿ ಮಂಗಳವಾರ ಕೊನೆಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries