ನವದೆಹಲಿ: 'ಪೂರ್ವ ಲಡಾಕ್‌ನ ಗಡಿ ವಿವಾದ ಸಂಬಂಧ ಭಾರತದ ಸಾರ್ವಭೌಮತ್ವ ಮತ್ತು ಘನತೆ ಕಾಪಾಡಲು ನಾನು ಬದ್ಧನಾಗಿದ್ದೇನೆ. ನೆರೆಯ ರಾಷ್ಟ್ರಗಳ ಜೊತೆಗಿನ ದ್ವಿಪಕ್ಷೀಯ ಒಪ್ಪಂದಗಳಿಗೆ ಬದ್ಧವಾಗಿಯೇ ದೇಶದ ಗಡಿ ಭಾಗದಲ್ಲಿ ಶಾಂತಿ ಕಾಪಾಡಲು ಒತ್ತು ನೀಡಲಾಗುವುದು' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
0
samarasasudhi
ಮೇ 20, 2023
ನವದೆಹಲಿ: 'ಪೂರ್ವ ಲಡಾಕ್‌ನ ಗಡಿ ವಿವಾದ ಸಂಬಂಧ ಭಾರತದ ಸಾರ್ವಭೌಮತ್ವ ಮತ್ತು ಘನತೆ ಕಾಪಾಡಲು ನಾನು ಬದ್ಧನಾಗಿದ್ದೇನೆ. ನೆರೆಯ ರಾಷ್ಟ್ರಗಳ ಜೊತೆಗಿನ ದ್ವಿಪಕ್ಷೀಯ ಒಪ್ಪಂದಗಳಿಗೆ ಬದ್ಧವಾಗಿಯೇ ದೇಶದ ಗಡಿ ಭಾಗದಲ್ಲಿ ಶಾಂತಿ ಕಾಪಾಡಲು ಒತ್ತು ನೀಡಲಾಗುವುದು' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಪಾನ್ ಪತ್ರಿಕೆ ನಿಕ್ಕಿ ಏಷ್ಯಾಗೆ ನೀಡಿದ ಸಂದರ್ಶನದಲ್ಲಿ ಚೀನಾ ಜೊತೆಗಿನ ಬಾಂಧವ್ಯದ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.
'ಎರಡೂ ದೇಶಗಳ ನಡುವಿನ ಭವಿಷ್ಯದ ಬಾಂಧವ್ಯವು ಪರಸ್ಪರ ಗೌರವ, ಸೂಕ್ಷ್ಮತೆ ಹಾಗೂ ಆಸಕ್ತಿಯ ಮೇಲೆ ನಿಂತಿದೆ' ಎಂದು ಹೇಳಿದ್ದಾರೆ.
'ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ಕಾನೂನಿನ ಚೌಕಟ್ಟಿನಲ್ಲಿಯೇ ಶಾಂತಿಯುತವಾಗಿ ಗಡಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಭಾರತ ಒತ್ತು ನೀಡಲಿದೆ' ಎಂದಿದ್ದಾರೆ.
ಭಾರತವು ನೆರೆಹೊರೆಯ ದೇಶಗಳ ಜೊತೆಗೆ ಸೌಹಾರ್ದಯುತ ವಾತಾವರಣವನ್ನು ಬಯಸುತ್ತದೆ. ಹಾಗಾಗಿ, ಪಾಕಿಸ್ತಾನವು ಹಗೆತನ ಮುಂದುವರಿಸುವುದು ಮತ್ತು ಭಯೋತ್ಪಾದನೆಯನ್ನು ಪೋಷಿಸುವ ಧೋರಣೆಯಿಂದ ಹಿಂದೆ ಸರಿಯಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.