ಕಾಸರಗೋಡು: ಜಿಲ್ಲಾ ಕುಟುಂಬಶ್ರೀ ಮಿಷನ್ ಕನ್ನಡ ವಲಯದ ಸಮುದಾಯ ಬಾಂಧವರ ಸಭೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಕನ್ನಡ ವಲಯದಲ್ಲಿ ಕುಟುಂಬಶ್ರೀ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು.
ಕನ್ನಡ ವಲಯದ ಹದಿನೈದು ಪಂಚಾಯಿತಿಗಳ ಮೂವತ್ತು ಮಂದಿ ಮಾರ್ಗದರ್ಶಕರು ಭಾಗವಹಿಸಿದ್ದರು. ಜೂನ್ 19 ರಿಂದ ಕನ್ನಡ ಪ್ರದೇಶದ ಪಂಚಾಯಿತಿಗಳಲ್ಲಿ ಆಯೋಜಿಸಲಿರುವ ವಾಚನಾ ಪಾಕ್ಷಿಕದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕುಟುಂಬಶ್ರೀ ಸಹಾಯಕ ಗುಂಪಿನ ಸದಸ್ಯರಿಗೆ ರಸಪ್ರಶ್ನೆ ಸ್ಪರ್ಧೆ, ಬಾಲಸಭಾದ ಮಕ್ಕಳಿಗೆ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಕುಟುಂಬಶ್ರೀ ಕನ್ನಡ ವಲಯದಲ್ಲಿ ವಿಶೇಷ ಯೋಜನೆಯನ್ವಯ ಸಮುದಾಯ ಮಾರ್ಗದರ್ಶಕರ ಪರಿಶೀಲನಾ ಸಭೆ ಹಾಗೂ ಕ್ರಿಯಾ ಯೋಜನೆ ಮಂಡನಾ ಕಾರ್ಯಕ್ರಮದಲ್ಲಿ ಕುಟುಂಬಶ್ರೀ ರಾಜ್ಯ ಕಾರ್ಯಕ್ರಮಾಧಿಕಾರಿ ರತೀಶ್ ಪಿಲಿಕೋಡ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಕೋರ್ಡಿನೇಟರ್ ಟಿ.ಟಿ.ಸುರೇಂದ್ರನ್, ಎಡಿಎಂಸಿ ಸಿ.ಎಚ್.ಇಕ್ಬಾಲ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಿಬ್ಬಂದಿ ಉಪಸ್ಥಿತರಿದ್ದರು.





