ಕಾಸರಗೋಡು: 2022-23ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ 1004 ಫೆÇೀನ್‍ಗಳು ಕಾಸರಗೋಡು ಸೈಬರ್ ಸೆಲ್ ಸಹಾಯದಿಂದ ಪತ್ತೆಹಚ್ಚಲಾಗಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಅವರ ನಿರ್ದೇಶಾನುಸಾರ ಸೈಬರ್ ಸೆಲ್ ಉಸ್ತುವಾರಿ ವಹಿಸಿಕೊಂಡಿರುವ ಡಿವೈಎಸ್ಪಿ ವಿ.ಕೆ ವಿಶ್ವಂಭರನ್ ನಾಯರ್, ಸೈಬರ್ ಸೆಲ್ ಇನ್ಸ್‍ಪೆಕ್ಟರ್ ಪಿ. ನಾರಾಯಣನ್ ಅವರ ಮೇಲ್ನೋಟದಲ್ಲಿ ಎಸ್‍ಐ ಪಿಕೆ ಅಜಿತ್ ಮತ್ತು ಸಿಪಿಒ ಸಿ ಸಜೇಶ್ ನೇತೃತ್ವದ ಪೊಲೀಸರ ತಂಡ ಈ ಸಾಧನೆ ಮಾಡಿದೆ.
ಜಿಲ್ಲೆಯ ವಿವಿಧ ಠಾಣೆಗಳು ಮತ್ತು ಸೈಬರ್ ಸೆಲ್‍ಗೆ ಲಭಿಸಿರುವ ದೂರುಗಳ ಆಧಾರದಲ್ಲಿ ಮೊಬೈಲ್ ಫೆÇೀನ್ ಇರುವ ಸ್ಥಳವನ್ನು ಪತ್ತೆಹಚ್ಚುವಲ್ಲಿ ಮತ್ತು ಈ ಮೊಬೈಲನ್ನು ವಾರಸುದಾರರಿಗೆ ಹಿಂತಿರುಗಿಸುವಲ್ಲಿ ಸೈಬರ್ ಸೆಲ್ ಮಹತ್ವದ ಸಾಧನೆ ತೋರಿದೆ.





