HEALTH TIPS

ಮಹಿಳೆ ಮತ್ತು ಮಕ್ಕಳಿಗೆ ವೇದಿಕೆ ಕಲ್ಪಿಸುವುದು ಶ್ಲಾಘನೀಯ : ಡಾ.ರೇಖಾ ರೈ

             ಕಾಸರಗೋಡು: ಸಾಂಸ್ಕøತಿಕ ಮತ್ತು ಸಾಹಿತ್ತಿಕ ಸಂಸ್ಥೆಯಾದ ರಂಗಚಿನ್ನಾರಿಯ ಅಂಗಸಂಸ್ಥೆಯಾದ ನಾರಿಚಿನ್ನಾರಿಯ 6 ನೇ ಸರಣಿ ಕಾರ್ಯಕ್ರಮ ಗಾನಯಾನವು ಸಂಗೀತ ಶಿಕ್ಷಕ ಉಷಾ ಈಶ್ವರ ಭಟ್ ದಂಪತಿಯ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. 

             ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮಾಜಿ ವಿಭಾಗದ ಮುಖ್ಯಸ್ಥೆ ಡಾ.ರೇಖಾ ರೈ ಅವರು ಇಂದಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಪ್ರತಿಭೆÉಗಳನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿ ಸದಭಿರುಚಿಯ ಕಲೆಯೂ ಕಲಾವಿದರೂ ಬೆಳೆಯುವಂತೆ ಮಾಡುವ ನಾರಿಚಿನ್ನಾರಿಯ ಪ್ರಯತ್ನವನ್ನು ಶ್ಲಾಘಿಸಿದರು. 


           ಶುಭಾಶಂಸನೆಯನ್ನು ಗೈದ ಖ್ಯಾತ ನೇತ್ರ ತಜ್ಞೆ ಡಾ.ಸುಮತಿ ಗಣೇಶ್ ಅವರು ನಾರಿಚಿನ್ನಾರಿ ಸಂಘಟನೆಯ ಭಾಗವಾಗಿರುವುದಕ್ಕೆ ಹರ್ಷವನ್ನು ವ್ಯಕ್ತಪಡಿಸಿ ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮತ್ತಷ್ಟು ಬೆಳೆಯಲು ಕರೆ ನೀಡಿದರು. ಈ ಸಂದಭರ್Àದಲ್ಲಿ ಹಿರಿಯ ಪ್ರಸೂತಿ ತಜ್ಞೆ, ವೈದ್ಯೆ ಡಾ.ಯಶೋದಾ ಅವರನ್ನು ಶಾಲು ಹೊದೆಸಿ, ಫಲಪುಷ್ಪಗಳನ್ನು ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ಡಾ.ಯಶೋದಾ ಅವರ ಸಾಧನೆಯನ್ನು ಕೊಂಡಾಡಿದರು. 

          ಗೌರವಾಧ್ಯಕ್ಷೆ ತಾರಾ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಸಮಯೋಚಿತವಾಗಿ ಮಾತನಾಡಿದರು. ಗಾನಯಾನ ಕಾರ್ಯಕ್ರಮವನ್ನು ತಮ್ಮ ನಿವಾಸದಲ್ಲಿ ಏರ್ಪಡಿಸಿದ ಉಷಾ ಈಶ್ವರ ಭಟ್ ದಂಪತಿಯನ್ನು ಈ ಸಂದಭರ್Àದಲ್ಲಿ ನಾರಿಚಿನ್ನಾರಿಯ ಪರವಾಗಿ ಶಾಲು ಹೊದೆಸಿ ಸಮ್ಮಾನಿಸಲಾಯಿತು. 


                ಪ್ರೀತ ಸಜಿತ್(ನೃತ್ಯ), ವಿದುಷಿ ಶ್ರೀದೇವಿ(ಸುಗಮ ಸಂಗೀತ), ಪ್ರಣಮ್ಯ ಕೆ.ಎಸ್(ಹರಿಕಥೆ), ಪ್ರಭಾ ರಮೇಶ್(ಭಕ್ತಿ ಗೀತೆ), ದೀಪಾ ಶ್ರೀ ಮತ್ತು ದಿವ್ಯಾಶ್ರೀ(ಶಾಸ್ತ್ರೀಯ ಸಂಗೀತ),  ಧ್ರುವಿ ಕಿರಣ್(ಮಲಯಾಳಂ ಜನಪದ ಗೀತೆ), ಡಾ.ಮಾಯಾ ಮಲ್ಯ(ವಯಲಿನ್), ಅನಘಾ ಪಿ.ಎಸ್(ಶಾಸ್ತ್ರೀಯ ಸಂಗೀತ), ನೇಹಾ ಎಸ್(ಕಾವ್ಯ ವಾಚನ), ಉಷಾ ನಾಗೇಶ್(ಭಾವಗೀತೆ), ಆರ್ಯ ವಿಜಯ್(ಮಲಯಾಳಂ ಹಾಡು), ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ನಿರ್ದೇಶಕಿ ವಿದುಷಿ ಉಷಾ ಈಶ್ವರ ಭಟ್ ಮತ್ತು ವಿದ್ಯಾರ್ಥಿಗಳಾದ ಪುಷ್ಪಾ, ಸಮನ್ವಿತಾ ಗಣೇಶ್, ಉಷಾ ರವಿಶಂಕರ್ ಭಟ್, ಡಾ.ಶಾರ್ವರಿ ಭಟ್, ಸುರೇಖಾ ಜಯ ಕುಮಾರ್, ಶ್ರದ್ಧಾ ಸತ್ಯನಾರಾಯಣ, ವಿದ್ಯಾ ನಾಗರಾಜ್ ಭಟ್, ಅರ್ಚನಾ ಶೆಣೈ, ಗಾಯಿತ್ರಿ ಹರಿಪ್ರಸಾದ್, ವಿಜಯ ಚಂದ್ರಶೇಖರ್, ಡಾ.ಮಾಯಾ ಮಲ್ಯ, ಪ್ರೀತಾ ಸಜಿತ್, ಶ್ರೀರಂಜಿನಿ (ಪಂಚರತ್ನ ಕೀರ್ತನೆ) ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.  


             ಕಾರ್ಯದರ್ಶಿ ದಿವ್ಯಾ ಗಟ್ಟಿ ಅವರ ಸಂಯೋಜಕತ್ವದಲ್ಲಿ ಬಬಿತಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಶಿವ ರಂಜಿನಿ ಪ್ರಾರ್ಥನೆ ಹಾಡಿದರು. ಶ್ಯಾಮಲಾ ರವಿರಾಜ್ ಸ್ವಾಗತಿಸಿ, ಪ್ರಮೀಳಾ ಚುಳ್ಳಿಕ್ಕಾನ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries