ಕುಂಬಳೆ: ಯುವ ಪ್ರತಿಭೆಗಳಲ್ಲಿ ಯಕ್ಷಗಾನ ತಾಳಮದ್ದಳೆ ಹವ್ಯಾಸ ಮತ್ತು ಅನುಭವ ಹೆಚ್ಚಿಸುವ ಉದ್ದೇಶದಿಂದ ರೂಪಗೊಂಡ ವಿರಾಮ ಯಕ್ಷಬಳಗದ ಜೇಷ್ಠ ಮಾಸದ ವಿಶೇಷ ತಾಳಮದ್ದಳೆ ಉದಯಶಂಕರ ಭಟ್ ಮಜಲು ಅವರ ನೇತೃತ್ವದಲ್ಲಿ ಜರಗಿತು. ವಾಲಿ ಮೋಕ್ಷ ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು.
ಭಾಗವತರಾಗಿ ಶ್ರೀಹರಿಹೊಳ್ಳ ಮಧೂರು, ಬೇಂದ್ರೋಡು ಗೋವಿಂದ ಭಟ್, ಹಿಮ್ಮೇಳದಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ವೇಣುಗೋಪಾಲ ಬರೆಕರೆ ಪಡ್ರೆ, ಕೃಷ್ಣಮೂರ್ತಿ ಪಾಡಿ, ಪಾತ್ರವರ್ಗದಲ್ಲಿ ಮುರಳೀಧರ ಯಾದವ್ ನಾಯ್ಕಾಪು, ಉದಯಶಂಕರ ಭಟ್ ಮಜಲು, ಲತೀಕ್ಷ, ಯಕ್ಷಿತ, ಅನಘಾ ಲಕ್ಷ್ಮೀ ಹಾಗೂ ಮೂರ್ತಿ ನಾಯ್ಕಾಪು ಸಹಕರಿಸಿದರು.




.jpeg)
