ಕಾಸರಗೋಡು:- ಭಾರತೀಯ ಜನತಾ ಎಸ್ ಸಿ ಮೋರ್ಚಾ ಜಿಲ್ಲಾ ಸಮಿತಿಯ ವತಿಯಿಂದ ಅಯ್ಯಂಗಾಳಿ ಸಮಾಧಿ ದಿನಾಚರಣೆಯು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಜರಗಿತು.
ಎಸ್ ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಂದರ ಮವ್ವಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಕೆ ಕಯ್ಯಾರ್ ದೀಪ ಬೆಳಗಿಸಿ ಪುμÁ್ಪರ್ಚನೆ ಗೈದು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ ಆರ್ ಮಹಾತ್ಮ ಅಯ್ಯಂಗಾಳಿಯರ ಜೀವನ ಕತೆಯನ್ನು ವಿವರಿಸಿ ಅವರು ನಡೆಸಿ ಕೊಟ್ಟ ದಾರಿಯಿಲ್ಲಿ ನಾವಿಂದು ನಿಶ್ಚಿಂತೆಯಿಂದ ನಡೆಯವಂತಾಯಿತೆಂದು ತಿಳಿಸಿದರು.
ರಾಜ್ಯ ಸಮಿತಿ ಸದಸ್ಯೆ ಸೌಧಾಮಿನಿ ಬಿ, ಉಪಾಧ್ಯಕ್ಷ ಸುಂದರ ಅರಮuಟಿಜeಜಿiಟಿeಜನ, ಕಾರ್ಯದರ್ಶಿ ರಘು ಮಾಚಾವು, ಕೋಶಾಧಿಕಾರಿ ಮಣಿ ನೆಲ್ಕಳ, ಬದಿಯಡ್ಕ ಮಂಡಲ ಅಧ್ಯಕ್ಷ ಸುರೇಶ್ ಬಿಕೆ, ಎಂಬಿವರು ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ ಪೆರಡಾಲ ಸ್ವಾಗತಿಸಿ ಬಿಜು ಅನಂತಪುರ ವಂದಿಸಿದರು.





