ಕಾಸರಗೋಡು: ಬಹು ಸಂಸ್ಕøತಿಯನ್ನೊಳಗೊಂಡ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಬಿಜೆಪಿ ಕನಸು ನನಸಾಗಲು ಕಾಂಗ್ರೆಸ್ ಆಸ್ಪದ ನೀಡದು ಎಂದು ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಅವರು ಸಮಾನ ನಾಗರಿಕ ಸಂಹಿತೆ ಜಾರಿ ವಿರೋಧಿಸಿ ಜುಲೈ 22ರಂದು ತಾನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು 24ತಾಸುಗಳ ನಿರಾಹಾರ ಸತ್ಯಾಗ್ರಹ ನಡೆಸುವ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇರಳದ ಎಡರಂಗ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭಾ ವಿಶೇಷ ಅಧಿವೇಶನ ಕರೆದು ಸಮಾನ ನಾಗರಿಕ ಸಂಹಿತೆ ವಿರುದ್ಧ ನಿಲುವಳಿ ಮಂಡಿಸಿ ಕೇಂದ್ರಕ್ಕೆ ರವಾನಿಸಲು ಮುಂದಾಗಬೇಕು. ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ವಿರೋಧಿ ಧೋರಣೆ ಕೈಬಿಡುವುದರ ಜತೆಗೆ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಈ ನಿಟ್ಟಿನಲ್ಲಿ ಸಂಸದನೆಂಬ ನೆಲೆಯಲ್ಲಿ ಹೋರಾಟ ಕೈಗೊಳ್ಳಲಿದ್ದೇನೆ. ಜು. 22ರಂದು ಬೆಳಗ್ಗೆ 9ರಿಂದ ಮರುದಿನ ಬೆಳಗ್ಗೆ 9ರ ವರೆಗೆ ಕಾಸರಗೋಡು ವಿದ್ಯಾನಗರದ ಸಿವಿಲ್ ಸ್ಟೇಶನ್ ವಠಾರದಲ್ಲಿ ನಿರಾಹಾರ ಸತ್ಯಾಗ್ರಹ ನಡೆಯಲಿದೆ. ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಧರಣಿ ಉದ್ಘಾಟಿಸುವರು. ಕಾಂಗ್ರೆಸ್‍ನ ಹಿರಿಯ ಮುಖಮಡರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಕಾಂಗ್ರೆಸ್ ಮುಖಂಡ ಪಿ.ಎ ಅಶ್ರಫ್ ಅಲಿ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.




