ಮಂಜೇಶ್ವರ : 16 ವರ್ಷಗಳ ನಂತರ ಮೊದಲ ಬಾರಿಗೆ ತೀವ್ರ ಪೈಪೋಟಿ ನಡೆದ ಚುನಾವಣೆಯಲ್ಲಿ ಸಿಪಿಎಂ ಕುಂಜತ್ತೂರು ಡೈರಿ ಸಹಕಾರಿ ಸಂಘವನ್ನು ಉಳಿಸಿಕೊಂಡಿದೆ.
8 ಸದಸ್ಯರ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಸಿಪಿಎಂ 24 ಮತಗಳನ್ನು ಗಳಿಸುವ ಮೂಲಕ ತನ್ನ ಶಕ್ತಿ ಸಾಬೀತುಪಡಿಸಿದೆ.
ಗಂಗಾಧರನ್ ಅಧ್ಯಕ್ಷರಾಗಿ ಮತ್ತು ಸಾಲ್ವಿ ವೇಗಸ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆಡಳಿತ ಮಂಡಳಿ ಸದಸ್ಯರಾಗಿ ಮಂಜಪ್ಪ ಭಂಡಾರಿ, ಪ್ರವೀಣ್ ಕಿಶೋರ್ ಡಿಸೋಜ, ರಮೇಶ್ ಸಪಲ್ಯ, ರುಕ್ಮಿಣಿ, ಅಪೋಲಿನಾ ಡಿಸೋಜ, ಶಶಿಕುಮಾರ್ ಆಯ್ಕೆಯಾದರು.
ಬಿಜೆಪಿಯ ಸಹಕಾರದೊಂದಿಗೆ ಸ್ಪರ್ಧಿಸಿದ್ದ ಎಂಟು ಸದಸ್ಯರ ತಂಡ ಕೇವಲ 13 ಮತಗಳನ್ನು ಪಡೆದು ತೃಪ್ತಿ ಪಟ್ಟಿದೆ.




.jpg)
