HEALTH TIPS

75ರ ವೃದ್ಧನ ಜತೆ ಬೆಡ್​ರೂಮ್​ನಲ್ಲಿ ಸಿಕ್ಕಿಬಿದ್ದ ಸೀರಿಯಲ್​ ನಟಿ: ತನಿಖೆಯಲ್ಲಿ ಬಯಲಾಯ್ತು ಕಣ್ಣೀರಿನ ನಾಟಕ

                 ಕೊಲ್ಲಂ: ಹಣದ ಮೇಲಿನ ವ್ಯಾಮೋಹದಿಂದ 75 ವರ್ಷದ ಹಿರಿಯ ವ್ಯಕ್ತಿಯನ್ನು ಹನಿಟ್ರ್ಯಾಪ್​ ಬಲೆಗೆ ಕೆಡವಿದ ಸೀರಿಯಲ್​ ನಟಿ ಹಾಗೂ ಆಕೆಯ ಸ್ನೇಹಿತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

                               ಮತ್ತೆ 25 ಲಕ್ಷ ವಸೂಲಿಗೆ ಯತ್ನ

              ಬಂಧಿತರನ್ನು ನಿತ್ಯ ಸಸಿ (40) ಮತ್ತು ಬಿನು (48) ಎಂದು ಗುರುತಿಸಲಾಗಿದೆ.

ಸಂತ್ರಸ್ತ ವ್ಯಕ್ತಿಯು ನಿವೃತ್ತ ಯೋಧನಾಗಿದ್ದು, ಕಾಲೇಜೊಂದರಲ್ಲಿ ಫುಟ್​ಬಾಲ್​ ಕೋಚ್​ ಆಗಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದಾರೆ. ಮೊದಲು 11 ಲಕ್ಷ ರೂ. ವಸೂಲಿ ಮಾಡಿದ ಆರೋಪಿಗಳು ಕೆಲವು ದಿನಗಳ ಬಳಿಕ ಮತ್ತೆ 25 ಲಕ್ಷ ರೂ. ವಸೂಲಿ ಮಾಡಲು ಯತ್ನಿಸಿದರು ಎಂದು ತಿಳಿದುಬಂದಿದೆ. ಆರೋಪಿ ನಿತ್ಯ ಸೀರಿಯಲ್​ ನಟಿ ಮಾತ್ರವಲ್ಲದೆ, ವಕೀಲೆಯು ಆಗಿದ್ದಾಳೆ. ಈಕೆ ಪಟ್ಟಣಂತಿಟ್ಟದ ಮಲಯಾಪುಳ ಮೂಲದ ನಿವಾಸಿ. ಮತ್ತೊಬ್ಬ ಆರೋಪಿ ಬಿನು ಪರವೂರು ನೆಗುಂಗೊಲಂ ಮೂಲದವನು.

ತುಂಬಾ ನಂಬಿಕೆ ಇಟ್ಟಿದ್ದ

                ಸಂತ್ರಸ್ತ ವ್ಯಕ್ತಿ ಪಟ್ಟಾಮ್​ನಲ್ಲಿ ನೆಲೆಸಿದ್ದು, ಪರವೂರ್​ ಕಲಕ್ಕೋಡ್​ ಸಮೀಪ ಸ್ವಂತ ಮನೆ ಮತ್ತು ಫಾರ್ಮ್​ಹೌಸ್​ ಅನ್ನು ಹೊಂದಿದ್ದಾರೆ. ಆರೋಪಿ ಬಿನು, ಸಂತ್ರಸ್ತನಿಗೆ ಸೋದರಳಿಯ ಆಗಬೇಕು. ಆತನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದ ಸಂತ್ರಸ್ತ, ತನ್ನ ಆಸ್ತಿಯನ್ನು ಮಾರಾಟ ಮಾಡಲು ಸಹಾಯ ಕೋರಿದ್ದರು. ಬಳಿಕ ಬಿನು ಆಸ್ತಿಯ ಮಾಹಿತಿಯನ್ನು ವಾಟ್ಸ್​ಆಯಪ್​ ಮೂಲಕ ಅನೇಕ ಜನರಿಗೆ ರವಾನಿಸಿದ್ದನು. ಇದನ್ನು ನೋಡಿ ನಿತ್ಯ, ಬಿನುನನ್ನು ಸಂಪರ್ಕ ಮಾಡಿದಳು. ಬಳಿಕ ಬಿನು, ಆಕೆಯನ್ನು ಸಂತ್ರಸ್ತನಿಗೆ ಪರಿಚಯ ಮಾಡಿಕೊಟ್ಟನು.

                                   ಅಸಲಿ ಮುಖವಾಡ ಕಳಚಿದ ಬಿನು

                 ಸಂತ್ರಸ್ತ ಮತ್ತು ನಿತ್ಯ ಆಗಾಗ ಭೇಟಿಯಾಗುತ್ತಿದ್ದರಿಂದ ಇಬ್ಬರ ನಡುವೆ ಆತ್ಮಿಯತೆ ಬೆಳೆಯಿತು. ಆಸ್ತಿಯನ್ನು ಖರೀದಿ ಮಾಡುವ ಬಗ್ಗೆ ಆತನೊಂದಿಗೆ ನಿತ್ಯ ಚರ್ಚೆ ಮಾಡಿದ್ದಳು. ಇಬ್ಬರು ನಡುವಿನ ಸ್ನೇಹ ಗಟ್ಟಿಯಾದ ಬಳಿಕ ಆತನ ಮನೆ ಮತ್ತು ಫಾರ್ಮ್​ಹೌಸ್​ ಅನ್ನು ಬಾಡಿಗೆ ಪಡೆಯಲು ನಿರ್ಧಾರ ಮಾಡಿದಳು. ಇದರ ನಡುವೆ ಜೂನ್​ 6ರಂದು ಕಲಕ್ಕೋಡ್​ನಲ್ಲಿರುವ ಸಂತ್ರಸ್ತನ ಮನೆಗೆ ನಿತ್ಯ ಆಗಮಿಸಿದಳು. ಈ ವೇಳೆ ಇಬ್ಬರು ಸರಸದಲ್ಲಿ ತೊಡಗಿರುವಾಗ ಬೆಡ್​ರೂಮ್​ನ ಕಿಟಕಿಯಿಂದ ಮೊಬೈಲ್​ ಫೋನ್​ ಮೂಲಕ ಬೆತ್ತಲೆ ದೃಶ್ಯಗಳನ್ನು ಸೆರೆಹಿಡಿದುಕೊಂಡನು. ಬಳಿಕ ತನ್ನ ಅಸಲಿ ಮುಖವಾಡ ಕಳಚಿದ ಬಿನು, ಸಂತ್ರಸ್ತ ಬಳಿ 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟನು. ಹಣ ಕೊಡದಿದ್ದರೆ, ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದನು.

                                      ಕಣ್ಣೀರಾಕಲು ಶುರು ಮಾಡಿದಳು

               ಸಂತ್ರಸ್ತನಿಂದ 15 ಲಕ್ಷ ಮತ್ತು ನಿತ್ಯಳಿಂದ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದನು. ಆದರೆ, ಇಬ್ಬರು ಸೇರಿ ಹನಿಟ್ರ್ಯಾಪ್​ ಮಾಡುತ್ತಿದ್ದಾರೆ ಎಂಬುದು ಸಂತ್ರಸ್ತನಿಗೆ ಗೊತ್ತಾಗಲೇ ಇಲ್ಲ. ಇತ್ತ ನಿತ್ಯ ಕೂಡ ನನ್ನ ಬಳಿ ಹಣ ಇಲ್ಲ ಎಂದು ಕಣ್ಣೀರಾಕಲು ಶುರು ಮಾಡಿದಳು. ಇದನ್ನು ನೋಡಿದ ಸಂತ್ರಸ್ತ ಬಿನುಗೆ ಕೊಡುವಂತೆ ಹೇಳಿ ಎರಡು ಕಂತುಗಳಲ್ಲಿ ನಿತ್ಯ ಖಾತೆಗೆ 11 ಲಕ್ಷ ರೂ. ಹಣವನ್ನು ಜಮಾ ಮಾಡಿದರು. ಹಣ ಪಡೆದು ಬಳಿಕ ಬಿನು ಮೊಬೈಲ್​ ಅನ್ನು ಬೆಂಕಿಗೆ ಹಾಕುವ ನಾಟಕ ಮಾಡಿದನು. ಆದಾಗ್ಯೂ ಇದಾದ ಕೆಲವೇ ದಿನಗಳಲ್ಲಿ ಬಿನು ಮತ್ತೆ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟನು.

                          ಅನುಮಾನ ಬಂದ ಕೂಡಲೇ ದೂರು

                ವಿಡಿಯೋ ಡಿಲೀಟ್​ ಆಗಿದೆ ಎಂದು ಸಂತ್ರಸ್ತ ನಂಬಿದ್ದ. ಆದರೆ, ವಾಟ್ಸ್​ಆಯಪ್​ ಮೂಲಕ ಸಂತ್ರಸ್ತನ ಮೊಬೈಲ್​ಗೆ ಮತ್ತೆ ವಿಡಿಯೋವನ್ನು ಬಿನು ಕಳುಹಿಸಿಕೊಟ್ಟನು. ಇತ್ತ ನಿತ್ಯ ಕೂಡ ಹಣ ಕೊಟ್ಟು ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳೋಣ ಎಂದು ಒತ್ತಾಯಿಸುತ್ತಿದ್ದಳು. ಇಬ್ಬರು ಒಟ್ಟಿಗೆ ಸೇರಿ ಏನೋ ನಾಟಕವಾಡುತ್ತಿದ್ದಾರೆ ಎಂಬ ಅನುಮಾನ ಬಂದ ಕೂಡಲೇ ಸಂತ್ರಸ್ತ ಜೂನ್​ 18ರಂದು ದೂರು ನೀಡಿದರು. ದೂರು ನೀಡಿರುವುದು ಗೊತ್ತಿಲ್ಲದೆ ನಿತ್ಯ ಮತ್ತು ಬಿನು ನಿರಂತವಾಗಿ ಸಂತ್ರಸ್ತನಿಗೆ ಕರೆ ಮಾಡುತ್ತಿದ್ದರು. ಪೊಲೀಸರ ಸೂಚನೆಯಂತೆ ಸಂತ್ರಸ್ತ ವ್ಯಕ್ತಿ ಬಿನು ಮತ್ತು ನಿತ್ಯಳನ್ನು ಪಟ್ಟಾಮ್​ನಲ್ಲಿರುವ ತನ್ನ ಫ್ಲ್ಯಾಟ್​ ಕರೆಸಿದನು. ಆತನ ಮಾತಿನಂತೆ ಫ್ಲ್ಯಾಟ್​ಗೆ ಬಂದ ಇಬ್ಬರನ್ನು ಪೊಲೀಸರು ಬಂಧಿಸಿ ಕಂಬಿ ಹಿಂದಿ ತಳ್ಳಿದ್ದಾರೆ.

                                         ಹಣ ವರ್ಗಾವಣೆ ಆಗಿಲ್ಲ

                   ಪರವೂರು​ ಸರ್ಕಲ್​ ಇನ್ಸ್​ಪೆಕ್ಟರ್​ ಎ. ನಿಸಾರ್​, ಸಬ್​ ಇನ್ಸ್​ಪೆಕ್ಟರ್​ ವಿಜಯ್​ಕುಮಾರ್​, ಪ್ರದೀಪ್​ ಮತ್ತು ಸಿಪಿಒ ಶೀಜಾ, ದೀಪಕ್​ ದಾಸ್​ ಮತ್ತು ಅನಿಲ್​ ಅವರ ತಂಡ ಆರೋಪಿಗಳನ್ನು ಸೆರೆಹಿಡಿದಿದೆ. ಸಂತ್ರಸ್ತನಿಂದ ಪಡೆದ ಹಣವನ್ನು ನಿತ್ಯ, ಬಿನು ಖಾತೆಗೆ ವರ್ಗಾವಣೆ ಮಾಡದಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಇಬ್ಬರ ಬ್ಯಾಂಕ್​ ಖಾತೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ವಿಚಾರಣೆ ಮುಂದುವರಿದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries