HEALTH TIPS

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿದ್ಯಾರ್ಥಿವೇತನ ವಿತರಣೆ

             ಬದಿಯಡ್ಕ: ಬೆಂಗಳೂರು ಬಯೋಟೆಕ್ ವ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ. ಶಾಮ ಭಟ್ ಪೊಟ್ಟಿಪ್ಪಲ ಮಂಗಳವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಭೇಟಿನೀಡಿದರು. ಈ ಸಂರ್ದರ್ಭ ಸ್ವಯಂಪ್ರೇರಿತರಾಗಿ ವಿದ್ಯಾರ್ಥಿ ವೇತನ ವಿತರಿಸಿದ ಅವರು, ಮಾತನಾಡಿ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಡುವ ಇಂತಹ ಶಾಲೆ ಸಮಾಜಕ್ಕೆ ಆವಶ್ಯಕತೆಯಿದೆ. ಎಲ್ಲಾ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮಹತ್ತರ ಸಾಧನೆಯನ್ನು ಮಾಡಿದಾಗ ಹೆತ್ತವರಿಗೆ ಆಗುವ ಸಂತಸ ವಿಶಿಷ್ಟವೆಂದು ಶಾಲೆಯ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿದರು.

           9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶಿಫಾಲಿ ಬೆಳಿಂಜ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಶ್ರೀವತ್ಸ ಎಂ.ಜೆ. ಸ್ವೀಕರಿಸಿ ಕೃತಜ್ಞತಾಭಾವದೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡರು. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಸ್ವಯಂಪ್ರೇರಿತರಾಗಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿರುವುದಕ್ಕೆ ಸಂತಸವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಆಶುಕವಿ ದಿವಂಗತ ಪೊಟ್ಟಿಪ್ಪಲ ನಾರಾಯಣ ಭಟ್ಟರ ಸ್ಮರಣಾರ್ಥ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ ಎಂದರು. ಡಾ. ಗಿರೀಶ್ ಹಾಗೂ ಡಾ. ವಾಣಿಶ್ರೀ ಪೊಟ್ಟಿಪ್ಪಲ ಉಪಸ್ಥಿತರಿದ್ದರು. ಅಧ್ಯಾಪಿಕೆಯರಾದ ರಶ್ಮಿ ಸ್ವಾಗತಿಸಿ, ಸುಪ್ರೀತಾ ರೈ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries