ಬದಿಯಡ್ಕ: ನೀರ್ಚಾಲು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಶ್ವತ್ಥ ಕಟ್ಟೆ ಚೌತಿಯ ಪೂರ್ವಭಾವಿ ಸಿದ್ಧತಾ ಮಹಾಸಭೆ ಜು. 9 ಭಾನುವಾರ ನೀರ್ಚಾಲು ಶಾಲಾ ಪರಿಸರದಲ್ಲಿ ನಡೆಯಲಿರುವುದು. ಬೆಳಗ್ಗೆ 9.30ಕ್ಕೆ ಭಕ್ತಾದಿಗಳು, ಸಮಿತಿ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿಯ ಪ್ರಕಟಣೆಯು ತಿಳಿಸಿದೆ.

