ಬದಿಯಡ್ಕ: ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಶಿಲಾಮಯ ಗಭರ್Àಗುಡಿ ಹಾಗೂ ತೀರ್ಥಮಂಟಪದ ಶಿಲಾನ್ಯಾಸ ಕಾರ್ಯಕ್ರಮ ಇಂದು(ಜು. 6) ನಡೆಯಲಿರುವುದು. ಬೆಳಗ್ಗೆ 8.11ರಿಂದ 9.07ರ ಕರ್ಕಟಕ ಲಗ್ನ ಶುಭಮುಹೂರ್ತದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ, ತಾಂತ್ರಿಕ ಕಾರ್ಯಕ್ರಮಗಳು ನಡೆಯಲಿದೆ. ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಶಿಲಾನ್ಯಾಸಗೈಯ್ಯುವರು. 9.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಕುಕ್ಕಂಗೋಡ್ಲು ಶ್ರೀಕಂಠಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ವಕೀಲ ಗೌರೀಶಂಕರ ರೈ ಕೋಡಿಂಗಾರುಗುತ್ತು, ನೋಟರಿ ವಕೀಲ ಸಂಕಪ್ಪ ವಿ. ಉಡುಪಿ, ಶ್ರೀ ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಅಭ್ಯಾಗತರಾಗಿ ಪಾಲ್ಗೊಳ್ಳುವರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಮುಕೇಶ್ ಗಟ್ಟಿ, ನೀಲೇಶ್ವರ ಮಲಬಾರ್ ದೇವಸ್ವಂ ಬೋರ್ಡ್ ಇನ್ಸ್‍ಪೆಕ್ಟರ್ ಉಮೇಶ ಅಟ್ಟೆಗೋಳಿ, ಉದ್ಯಮಿ ರಾಮ ಭಟ್ ಪತ್ತಡ್ಕ ಪುತ್ತೂರು, ಶ್ರೀ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಪಾಲ್ಗೊಳ್ಳುವರು. ಮಧ್ಯಾಹ್ನ ಅನ್ನದಾನ ನಡೆಯಲಿರುವುದು. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇವಲ 4 ದಿನಗಳ ಶ್ರಮದಾನ :
ಜೂನ್ 21ರಂದು ಬಾಲಾಲಯ ಪ್ರತಿಷ್ಠೆ ನಡೆದಿದ್ದು, ಜೂ.25ರಂದು ಮಹಾವಿಷ್ಣು ಸನ್ನಿಧಿಯಲ್ಲಿ ಮಹಾಶ್ರಮದಾನ ಎಂಬ ಧ್ಯೇಯವಾಕ್ಯದೊಂದಿಗೆ ನೂರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ಶಿಲಾನ್ಯಾಸ ಪೂರ್ವ ಸಿದ್ಧತೆ ಆರಂಭಗೊಂಡಿತ್ತು. ಕೇವಲ ನಾಲ್ಕು ದಿನಗಳಲ್ಲಿ ಊರಪರವೂರ ಸಂಘಸಂಸ್ಥೆಗಳ ಪಾಲ್ಗೊಳ್ಳುವಿಕೆಯಿಂದ ಯಂತ್ರಗಳನ್ನು ಬಳಸದೆ ಭೂಮಿಖನನ ಕಾರ್ಯ ನಡೆದು ಅಡಿಪಾಯ ಕೆಲಸ ನಡೆಯಿತು.


.jpg)
