ಕುಂಬಳೆ: ಎಡೆಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಅಲ್ಲಲ್ಲ್ಲಿ ಹಾನಿಗಳು ವರದಿಯಾಗಿದೆ. ಕುಂಬಳೆ ಕಂಚಿಕಟ್ಟೆಯಿಂದ ಕೋಟೆಕಾರಿಗೆ ತೆರಳುವ ರಸ್ತೆಗೆ ಗುಡ್ಡೆ ಕುಸಿದು ಬಿದ್ದಿದೆ. ಬುಧವಾರ ಬೆಳಿಗ್ಗೆ ರಸ್ತೆಗೆ ಬೃಹತ್ ಪ್ರಮಾಣದ ಮಣ್ಣು ಕುಸಿದಿದ್ದು ಸಂಚಾರ ಅಡಚಣೆ ಉಂಟಾಗಿದೆ. ದಿನನಿತ್ಯ ನೂರಾರು ಮಕ್ಕಳು ನಡೆದು ಸಾಗುವ ರಸ್ತೆ ಇದಾಗಿದೆ. ಬುಧವಾರ ಮಳೆಯ ಕಾರಣ ಶಾಲೆಗಳಿಗೆ ರಜೆ ಇದ್ದುದರಿಂದ ಜನಸಂಚಾರ ವಿರಳವಾಗಿತ್ತು. ಇದರಿಂದ ಅಪಾಯ ತಪ್ಪಿದೆ.
ಉಪ್ಪಳ ಹೊಳೆ ತುಂಬಿ ಹರಿಯುತ್ತಿದ್ದು, ಗರಿಷ್ಠ ಮಟ್ಟ ಮೀರಿದೆ. ಇದರಿಂದ ಹೊಳೆ ಪರಿಸರದಲ್ಲಿ ವಾಸಿಸುವವರು ಜಾಗ್ರತೆ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

.jpg)
