ಕುಂಬಳೆ: ಕೆ.ಎಸ್.ಇ.ಬಿ.ಗುತ್ತಿಗೆ ನೌಕರನಿಗೆ ಬುಧವಾರ ವಿದ್ಯುತ್ ಆಘಾತಕ್ಕೊಳಗಾದ ಘಟನೆ ನಡೆದಿದೆ. ಕುಂಬಳೆ ಬಳಿಯ ಪೂಕಟ್ಟೆ ನಿವಾಸಿ ನವೀನ್(38) ಎಂಬವರಿಗೆ ಶಾಕ್ ತಗಲಿದ್ದು, ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಚಿಕಟ್ಟೆ ಬಾಯಿಕಟ್ಟೆ ಬಳಿ ವಿದ್ಯುತ್ ತಂತಿಗೆ ಸ್ಪರ್ಶಿಸುತ್ತಿದ್ದ ಮರದ ಕೊಂಬೆಯೊಂದನ್ನು ಕಡಿಯಲು ಯತ್ನಿಸಿದ ವೇಳೆ ಆಘಾತ ಉಂಟಾಗಿದೆ. ಕೂಡಲೇ ಜೊತೆಯಲ್ಲಿದ್ದ ನೌಕರರು ಆಸ್ಪತ್ರೆಗೆ ಕರೆದೊಯ್ದರು.

-naveen.jpg)
