HEALTH TIPS

ರಾಮ ಪ್ರಸಾದ್ ಕಾಸರಗೋಡು ರ ಜನ್ಮ ದಿನಾಚರಣೆ

            ಬದಿಯಡ್ಕ: ಕಾಸರಗೋಡಿನ ಖ್ಯಾತ ಹೊಟೇಲ್ ಉದ್ಯಮಿ, ಧಾರ್ಮಿಕ ಮುಂದಾಳು ರಾಮ ಪ್ರಸಾದ್ ಕಾಸರಗೋಡು ಅವರ 60 ನೇ ಜನ್ಮ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಎಡನೀರು ಮಠದಲ್ಲಿ ಜರಗಿತು. 

               ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ರಾಮ ಪ್ರಸಾದ್ - ಪದ್ಮಶ್ರೀ ದಂಪತಿಗಳಿಗೆ ಶ್ರೀಗಳು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ರಾಮ ಪ್ರಸಾದ 60 ರ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧÀಕರನ್ನು ರಾಮ ಪ್ರಸಾದ ದಂಪತಿಗಳು ಸಮ್ಮಾನಿಸಿದರು. ಖ್ಯಾತ ಉದ್ಯಮಿ ಶತಾಯುಷಿ ಕೆ.ಅನಂತ ಭಕ್ತ ಕಾಸರಗೋಡು, ಉದ್ಯಮಿ ವಿಜಯ ಅಗರ್‍ವಾಲ್ ಪೂನಾ, ಸಂಘಟಕ, ಯಕ್ಷಗಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರನ್ನು ಗೌರವಿಸಲಾಯಿತು. 

              ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ಕುಂಟಾರು ರವೀಶ ತಂತ್ರಿ, ಎರ್ನಾಕುಳಂ ಉಡುಪಿ ಮಾದ್ವ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಲಕ್ಷ್ಮೀಶ್ ರಾವ್ ಕಡಂಬಾರು, ಬ್ರಹ್ಮಶ್ರೀ ಗೋಪಾಲಕೃಷ್ಣ ಅಡಿಗ ಪಾಣಾಜೆ, ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದು ಮಾತನಾಡಿದರು. 

           ಸಮಾರಂಭದ ಅಂಗವಾಗಿ ಹರಿವರಾಸನಂ ಪ್ರಶಸ್ತಿ ಪುರಸ್ಕøತ ಕಲೈಮಾಮಣಿ ಶ್ರೀ ವೀರಮಣಿ ರಾಜು ಚೆನ್ನೈ, ಭಕ್ತಿ ಗಾನ ಗಾಂಧರ್ವ ಅಭಿಷೇಕ್ ರಾಜು ಚೆನ್ನೈ ಅವರಿಂದ ಭಕ್ತಿ ಗಾನಸುಧಾ ನಡೆಯಿತು. ರಾಮಪ್ರಸಾದ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿನಂದನಾ ಸಮಿತಿ ಪದಾಧಿಕಾರಿಗಳಾದ ಕೆ.ಗುರುಪ್ರಸಾದ್ ಕೋಟೆಕಣಿ, ಕೆ.ಜಗದೀಶ್ ಕೂಡ್ಲು, ಶ್ರೀಕಾಂತ್ ಕಾಸರಗೋಡು, ಪಿ.ದಿವಾಕರ ಅಶೋಕನಗರ, ಕುಶಲ ಕುಮಾರ್ ಕೆ, ಸತ್ಯನಾರಾಯಣ ಕೆ. ಪುರುಷೋತ್ತಮ ಎಂ.ನಾೈಕ್. ಎಂ.ಅಶೋಕ್ ರೈ ಸೂರ್ಲು, ರಾಮಪ್ರಸಾದ್ ಕಾಸರಗೋಡು ಅವರ ಸಹೋದರಾದ ವಸಂತ ಕುಮಾರ್, ಶ್ರೀನಿವಾಸ, ಲಕ್ಷ್ಮೀಶ, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ರಾಮ ಪ್ರಸಾದ ಕಾಸರಗೋಡು ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ವಿ.ಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಅನನ್ಯಾ ಮಹೇಶ್ ಸ್ವಾಗತಿಸಿ, ರಾಹುಲ್ ರಾಮ್ ಭಟ್ ವಂದಿಸಿದರು. ಸುಚಿತ್ರಾ ಮಹೇಶ್ ಪ್ರಾರ್ಥನೆ ಹಾಡಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries