ಕಾಸರಗೋಡು: ಪರಸ್ಪರ ನಂಬಿಕೆಯೇ ಭಾರತದ ವೈವಿಧ್ಯತೆಯ ಶಕ್ತಿ ಎಂಬುದಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಿಳಿಸಿದ್ದಾರೆ.
ಅವರು ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ
120 ನೇ ವಾರ್ಷಿಕೋತ್ಸವವನ್ನು ನಿನ್ನೆ ಉದ್ಘಾಟಿಸಿ ಮಾತನಾಡಿದರು.
ಏಳಕ್ಕೂ ಹೆಚ್ಚು ಭಾಷೆಗಳನ್ನಾಡುವ ಜಿಲ್ಲೆ ಕಾಸರಗೋಡಿನ ಭಾಷಾ ವೈವಿಧ್ಯತೆ ಮತ್ತು ಸಂಸ್ಕøತಿ ಅನುಕರಣೀಯ. ಶಿಕ್ಷಣ ಮತ್ತು ಜ್ಞಾನಾರ್ಜನೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಜಗತ್ತಿನ ಎಲ್ಲ ನಾಗರೀಕತೆಗಳು ನಶಿಸಿ ಹೋಗಿದ್ದರೂ ಭಾರತೀಯ ನಾಗರಿಕತೆ ಉಳಿದುಕೊಳ್ಳಲು ಸಾಧ್ಯವಾಗಿದೆ. ಕೇರಳದ ಪ್ರಗತಿಗೆ ಶಿಕ್ಷಣ ಮತ್ತು ಸಾಕ್ಷರತೆಯೇ ಕಾರಣ. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿಯಿರಿ. ಕೇರಳದ ಜನರು ಭಾಷೆಗಳನ್ನು ಕಲಿಯುವುದರಲ್ಲಿ ನಿಪುಣರು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೇರಳ ಶೇ 100ರಷ್ಟು ಸಾಕ್ಷರತೆ ಸಾಧಿಸಿದೆ. ಜೀವನದ ಹಾದಿ ನಿರ್ಧರಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿದೆ ಜತೆಗೆ ಉತ್ತಮ ವ್ಯಕ್ತಿತ್ವ, ವಿದ್ಯಾಸಂಪನ್ನತೆ ಗಳಿಸಬಹುದು.ಸ್ವಾತಂತ್ರ್ಯ ಬಂದು 75ನೇ ವರ್ಷಕ್ಕೆ ಕಾಲಿಡುತ್ತಿರುವ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜ್ಞಾನ ಆರ್ಥಿಕತೆಯನ್ನು ಹೆಚ್ಚಿಸುವ ನೀತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಸಂಸದ ರಾಜಮೋಹನ್ ಉಣ್ಣಿತ್ತಾನ್, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಡಿಡಿಇ. ಬಿ ಸುರೇಂದ್ರನ್, ನಗರಸಭಾ ಸದಸ್ಯೆ ವಂದನಾ ಬಾಲರಾಜ್, ಪಿಟಿಎ ಅಧ್ಯಕ್ಷ ಸಂತೋಷ್ ಕುಶಾಲ್ ನಗರ ಉಪಸ್ಥಿತರಿದ್ದರು. ಸಂಘಟನಾ ಸಮಿತಿ ಅಧ್ಯಕ್ಷ ಎಂ.ರಾಘವನ್ ಸ್ವಾಗತಿಸಿದರು ಪ್ರಧಾನ ಸಂಚಾಲಕ ಡಾ. ಎ.ವಿ ಸುರೇಶ್ ವಂದಿಸಿದರು.


