ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿ ಹಾಗೂ ಕೃಷಿ ಭವನದ ಸಂಯುಕ್ತಾಶ್ರಯದಲ್ಲಿ ಕೃಷಿಕರ ದಿನಾಚರಣೆಯನ್ನು ಪಂಚಾಯತಿ ಸಭಾ ಭವನದಲ್ಲಿ ಗುರುವಾರ ಆಚರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ.ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಂಚಾಯತಿಯ ವಿವಿಧ ವಲಯದ 14 ಸಾಧಕ ರೈತರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗೀತಾ ಕೆ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಎಂ ರೈ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್, ವಾರ್ಡ್ ಸದಸ್ಯರಾದ ಶ್ರೀಪತಿ, ಎಡಿಎ ಸುಧಾ, ಕಾರ್ಯದರ್ಶಿ ಗೀತಾ, ರಾಜಕೀಯ ಪ್ರತಿನಿಧಿಗಳಾದ ಸೂಫಿ, ಸುಂದರ ರಾಜ್ ಮಾತನಾಡಿದರು. ವೇದಿಕೆಯಲ್ಲಿ ಸದಸ್ಯರಾದ ಗೀತಾ, ಬೇಬಿ, ಭಾಗೀರಥಿ, ವೀರೇಂದ್ರಕುಮಾರ್, ಭಾಗೀರಥಿ ರೈ, ದುರ್ಗಾದೇವಿ ಉಪಸ್ಥಿತರಿದ್ದರು. ರೈತರು, ಕೃಷಿ ಕಾರ್ಮಿಕರು, ಪೌರಕಾರ್ಮಿಕರು, ಪಂಚಾಯಿತಿ ನೌಕರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಗಿರೀಶ್ ಬಿ ಸ್ವಾಗತಿಸಿ, ಕೃಷಿ ಸಹಾಯಕ ಪ್ರಜೇಶ್ ವಂದಿಸಿದರು.

.jpg)
