ಕಾಸರಗೋಡು: ಮಾಹಿತಿ ಹಕ್ಕು ಕಾಯ್ದೆಯನ್ವಯ ಕೇಳಿದ ಮಾಹಿತಿಗೆ ಸೂಕ್ತ ಉತ್ತರ ನೀಡದ ಬದಿಯಡ್ಕ ಗ್ರಾಮ ಪಂಚಾಯಿತಿಯ ಮಾಹಿತಿ ಅಧಿಕಾರಿ ಹಾಗೂ ಹೆಡ್ ಕ್ಲರ್ಕ್ ಆಗಿದ್ದ ರಾಮಚಂದ್ರ ಎಂಬವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಎ. ಅಬ್ದುಲ್ ರಹೀಂ 5ಸಾವಿರ ರಊ. ದಮಡ ವಿಧಿಸಿದ್ದಾರೆ. ಬದಿಯಡ್ಕದ ಮಾಹಿತಿ ಹಕ್ಕು ಕಾರ್ಯಕರ್ತ ಚೆಡೆಕ್ಕಲ್ ನಿವಾಸಿ ಮಹಮ್ಮದ್ ಕುಞÂ ಅವರ ದೂರಿನ ಮೇರೆಗೆ ಈ ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಇವರ ವೇತನದಿಂದ ಹಣ ವಸೂಲಿ ಮಾಡಬೇಕು ತಪ್ಪಿದಲ್ಲಿ ಇವರ ಸಒತ್ತು ಮುಟ್ಟುಗೋಲು ಹಾಕುವಂತೆಯೂ ಸೂಚಿಸಲಾಗಿದೆ.

