ಕಾಸರಗೋಡು: ತ್ರಿಕರಿಪುರ ಗ್ರಾಮ ಪಂಚಾಯಿತಿಯ ಹಸಿರು ಕ್ರಿಯಾ ಸೇನಾ ಸದಸ್ಯರೊಂದಿಗೆ ಓಣಂ ಹಬ್ಬವನ್ನು ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭ ಪಂಚಾಯಿತಿಯ 39 ಹಸಿರು ಕ್ರಿಯಾ ಸೇನಾ ಸದಸ್ಯರಿಗೆ ಓಣಂ ಬಟ್ಟೆ, ಬೋನಸ್, ಹಸಿರು ಕ್ರಿಯಾ ಸೇನಾ ಸಮವಸ್ತ್ರವನ್ನು ಸೂಫಿಯಾನ್ ಅಹಮ್ಮದ್ ವಿತರಿಸಿದರು ಗ್ರಾ.ಪಂ.ಅಧ್ಯಕ್ಷ ವಿ.ಕೆ.ಬಾವಾ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಧ್ಯಕ್ಷರು ಹಸಿರು ಕ್ರಿಯಾ ಸೇನಾ ಸದಸ್ಯರಿಗಿರುವ ಸಮವಸ್ತ್ರ ವಿತರಿಸಿದರು. ಗ್ರಾಮ ಪಂಚಾಯಿತಿಯೊಂದಿಗಿನ ಒಪ್ಪಂದದ ಪ್ರಕಾರ ಸಕಾಲಕ್ಕೆ ಅಜೈವಿಕ ತ್ಯಾಜ್ಯ ಸಂಗ್ರಹಿಸಿ ಸಂಬಂಧಪಟ್ಟ ಏಜೆನ್ಸಿಗಳಿಗೆ ಪೂರೈಸಿರುವ ಹಿನ್ನೆಲೆಯಲ್ಲಿ ಗ್ರಾ.ಪಂ. ವತಿಯಿಂದ ಸದಸ್ಯರಿಗೆ ಉಡುಗೊರೆ ನೀಡಲಾಯಿತು. ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ಹಸಿರು ಕ್ರಿಯಾ ಸೇನೆ ಬೋನಸ್ ಹಾಗೂ ಓಣಂ ವಸ್ತ್ರ ನೀಡುತ್ತಿರುವ ಏಕೈಕ ಪಂಚಾಯಿತಿ ಇದಗಿದೆ. ಓಣಂ ಅಲ್ಲದೆ ವಿಷು ಹಬ್ಬಕ್ಕೂ ಬೋನಸ್ ವಿತರಿಸಲಾಗುತ್ತಿದೆ.





