ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ಓಣಂ ಮಾರುಕಟ್ಟೆ ಮೇಳ ಆರಂಭವಾಗಿದೆ. ಓಣಂ ಮಾರುಕಟ್ಟೆ ಮೇಳವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎ.ರಹಮಾನ್, ನಸೀಮಾ ಖಾಲಿದ್, ಪಂಚಾಯತಿ ಸದಸ್ಯರಾದ ಯೂಸುಫ್ ಉಳುವಾರ್, ಕೌಲತ್ ಬೀವಿ, ಸುಲೋಚನಾ, ತಾಹಿರಾ ಶಂಸೀರ್, ಮೋಹನ, ರವಿರಾಜ್, ಪುಷ್ಪಲತಾ ಶೆಟ್ಟಿ ಮಾತನಾಡಿದರು. ಗ್ರಾ.ಪಂ.ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಸ್ವಾಗತಿಸಿ, ಸಿಡಿಎಸ್ ಅಧ್ಯಕ್ಷೆ ಖದೀಜಾ ವಂದಿಸಿದರು. ಓಣಂ ಮಾರುಕಟ್ಟೆ ಮೇಳವು ಆಗಸ್ಟ್ 29 ರಂದು ಮುಕ್ತಾಯಗೊಳ್ಳಲಿದೆ.




.jpeg)
