ಪೆರ್ಲ: ಆಧುನಿಕತೆಯ ಮುಷ್ಟಿಯಲ್ಲಿ ಸಿಕ್ಕಿದ ಯುವಜನತೆಯು ಕೃಷಿಯ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇದರ ಪರಿಣಾಮವಾಗಿ ಗದ್ದೆ ತೋಟಗಳ ಸಂಖ್ಯೆಯು ಕಡಿಮೆಯಾಗಿ ವಿಷಪೂರಿತ ಆಹಾರವು ನಮ್ಮ ಶರೀರವನ್ನು ಸೇರುತ್ತದೆ. ಇದು ಆರೋಗ್ಯಕ್ಕೆ ಹಾನಿಕರವಾಗಿದೆ. ಆದ್ದರಿಂದ ಕೃಷಿ ಸಂಸ್ಕøತಿಯನ್ನು ಸಂರಕ್ಷಿಸುವ ಹೊಣೆ ನಮ್ಮದಾಗಬೇಕು ಎಂದು ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಮಾಜಿ ಪ್ರಾಂಶುಪಾಲ ರವೀಂದ್ರನಾಥ ನಾಯಕ್ ಹೇಳಿದರು.
ಕೃಷಿಕರ ದಿನಾಚರಣೆಯ ಅಂಗವಾಗಿ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್. ಎಸ್ ಘಟಕವು ಆಯೋಜಿಸಿದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಂಗ್ಲ ಭಾಷಾ ಶಿಕ್ಷಕ ಶಾಸ್ತ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಗತಿಪರ ಕೃಷಿಕರಾದÀ ಗಣಪತಿ ಭಟ್ ಮತ್ತು ಸೌಮ್ಯಲತ ಅವರನ್ನು ಸನ್ಮಾನಿಸಲಾಯಿತು. ಮಲಯಾಳಂ ಶಿಕ್ಷಕಿ ತುಷಾರ ಮತ್ತು ಕನ್ನಡ ಶಿಕ್ಷಕ ಡಾ. ಸುಭಾಷ್ ಪಟ್ಟಾಜೆ ಶುಭವನ್ನು ಹಾರೈಸಿದರು.
ಗಣಿತ ಶಿಕ್ಷಕ ಡಾ. ಅನೀಶ್ ಕುಮಾರ್ ನಿರೂಪಿಸಿದರು. ಎನ್. ಎಸ್. ಎಸ್. ಯೋಜನಾಧಿಕಾರಿ ಸಂತೋμï ಕುಮಾರ್ ಕ್ರಾಸ್ತಾ ಸ್ವಾಗತಿಸಿ, ವಿದ್ಯಾರ್ಥಿ ಪೂಜಾ ವಂದಿಸಿದರು.

.jpg)
