ಇಂಫಾಲ್: ಮಣಿಪುರದಲ್ಲಿ ನಾಳೆ (ಆ.29) ನಡೆಯಲಿರುವ ವಿಧಾನಸಭೆಯ ಒಂದು ದಿನದ ಅಧಿವೇಶನವನ್ನು ಬುಡಕಟ್ಟು ಸಮುದಾಯದ ಸಂಘಟನೆಗಳು ಖಂಡಿಸಿವೆ.
0
samarasasudhi
ಆಗಸ್ಟ್ 28, 2023
ಇಂಫಾಲ್: ಮಣಿಪುರದಲ್ಲಿ ನಾಳೆ (ಆ.29) ನಡೆಯಲಿರುವ ವಿಧಾನಸಭೆಯ ಒಂದು ದಿನದ ಅಧಿವೇಶನವನ್ನು ಬುಡಕಟ್ಟು ಸಮುದಾಯದ ಸಂಘಟನೆಗಳು ಖಂಡಿಸಿವೆ.
ಹದಗೆಟ್ಟ ಕಾನೂನು-ಸುವ್ಯವಸ್ಥೆ, ಸಾಮಾನ್ಯ ಜನರ ಮತ್ತು ಅಧಿಕಾರಿಗಳ ಜೀವ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಪರಿಗಣಿಸಿದರೆ, ಅಧಿವೇಶನವನ್ನು ಕರೆಯುವುದರಲ್ಲಿ ಯಾವ ತರ್ಕವೂ ಇಲ್ಲ ಎಂದು 'ದಿ ಕಮಿಟಿ ಆನ್ ಟ್ರೈಬಲ್ ಯೂನಿಟಿ (ಸಿಒಟಿಯು) ಮತ್ತು ಇಂಡಿಜೀನಿಯಸ್ ಟ್ರೈಬಲ್ ಲೀಡರ್ಸ್ ಫೋರಮ್ (ಐಟಿಎಲ್‌ಎಫ್)' ಆಕ್ರೋಶ ವ್ಯಕ್ತಪಡಿಸಿವೆ.