ಕಾಸರಗೋಡು : ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಉತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಯಿತು. ಪಿಟಿಎ ಅಧ್ಯಕ್ಷ ಬಿ.ಎಂ. ಪ್ರದೀಪ್, ಮದರ್ ಪಿಟಿಎ ಅಧ್ಯಕ್ಷೆ ಅನಿಮಾ ಅನಿಲ್, ಕಾಲೇಜು ಪ್ರಾಂಶುಪಾಲ ಸಜೀವನ್ ಮಡಪರಂಬತ್, ವಿಎಚ್‍ಎಸ್‍ಸಿ ಪ್ರಾಂಶುಪಾಲ ಸಚೀಂದ್ರನಾಥ್, ಮುಖ್ಯಶಿಕ್ಷಕ ಎ.ಎಂ. ಅಬ್ದುಲ್ ಸಲಾಂ, ಎಸ್‍ಆರ್‍ಜಿ ಸಂಚಾಲಕ ಕೆ. ನಿಮಿಷಬಾಬು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
"ಗ್ರೀನ್ ಪೆÇ್ರೀಟೋಕಾಲ್" ಅನ್ನು ಸಂಪೂರ್ಣವಾಗಿ ಪಾಲಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮದ ಅಂಗವಾಗಿ ಎಲ್ಲಾ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಹೂವಿನ ರಂಗೋಲಿ ರಚಿಸಿದ್ದರು. ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು. ಮಧ್ಯಾಹ್ನ ಎಲ್ಲರಿಗೂ ಓಣಂ ಔತಣಕೂಟ ಏರ್ಪಡಿಸಲಾಗಿತ್ತು. ಶಾಲಾ ಪಿಟಿಎ ಅಧ್ಯಕ್ಷ, ತರಗತಿ ಪಿಟಿಎ ಅಧ್ಯಕ್ಷರುಗಳು ಮತ್ತು ಸದಸ್ಯರು ಪಲ್ಗೊಂಡಿದ್ದರು. ಶಾಲಾ ವಠಾರದಲ್ಲಿ ಮಕ್ಕಳಿಗಾಗಿ ನಿರ್ಮಿಸಲಾದ ಉಯ್ಯಾಲೆಯಲ್ಲಿ ವಿದ್ಯಾರ್ಥಿಗಳು ಜೋಕಾಲಿ ಆಟವಡಿ ಸಂಭ್ರಮಿಸಿದರು.
ಮಹಾಬಲಿ ವೆಷಧಾರಿಯನ್ನೊಳಗೊಮಡ ಮೆರವಣಿಗೆ, ಹುಲಿ ವೇಷಧಾರಿಗಳ ಕುಣಿತ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.





