HEALTH TIPS

ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳನ್ನು ಸೇವಾ ಸಂಸ್ಥೆಗಳಾದರೂ ಜಾರಿಗೊಳಿಸಬೇಕು: ಮಾಜಿ ಡಿಜಿಪಿ ಜೇಕಬ್ ಥಾಮಸ್

                ತಿರುವನಂತಪುರಂ: ಆಡಳಿತ ಸುಧಾರಣಾ ಆಯೋಗಗಳ ಶಿಫಾರಸುಗಳು ಧೂಳು ಹಿಡಿಯುತ್ತಿದ್ದು, ಸೇವಾ ಸಂಸ್ಥೆಗಳು ಪ್ರತಿ ವರ್ಷವಾದರೂ ಕೆಲ ಶಿಫಾರಸುಗಳನ್ನು ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಮಾಜಿ ಡಿಜಿಪಿ ಜೇಕಬ್ ಥಾಮಸ್ ಹೇಳಿರುವÀರು.

                    ಅವರು ಮನ್ನಂ ಸ್ಮಾರಕ ಭವನದಲ್ಲಿ ಕೇರಳ ಸೆಕ್ರೆಟರಿಯೇಟ್ ನೌಕರರ ಸಂಘದ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

              ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಕಚೇರಿಗಳು ಭ್ರಷ್ಟಾಚಾರದ ಆರೋಪದಲ್ಲಿ ಮುಳುಗಿವೆ. ಗ್ರಾ.ಪಂ.ಕಚೇರಿಯಲ್ಲಿ ತೀರ್ಮಾನವಾಗಬೇಕಾದ ವಿಷಯಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಇಪ್ಪತ್ತು ಮೂವತ್ತು ಗಂಟೆಗಳ ಕಾಲ ನೂಕುನುಗ್ಗಲು ಮಾಡಿದರೆ ಅಧಿಕಾರ ವಿಕೇಂದ್ರೀಕರಣ ಕೆಲಸ ಮಾಡುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜಾರಿಯಾಗಿ 30 ವರ್ಷ ಕಳೆದರೂ ಅಧಿಕಾರ ವಿಕೇಂದ್ರೀಕರಣದ ಪ್ರಯೋಜನ ಜನರಿಗೆ ಸಿಗುತ್ತಿಲ್ಲ. ಪ್ರತಿ ಇಲಾಖೆಯಲ್ಲಿ ಸಾವಿರಾರು ಕಡತಗಳು ಬಾಕಿ ಇವೆ ಎಂದರು.

           ಕೆಎಸ್‍ಇಎಸ್ ಅಧ್ಯಕ್ಷ ಆಕಾಶ್ ರವಿ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಆನಂದ್ ಇ.ವಿ., ಫೆಟೊ ರಾಜ್ಯಾಧ್ಯಕ್ಷ ಎಸ್.ಕೆ. ಜಯಕುಮಾರ್, ಎನ್ ಜಿಒ ಸಂಘದ ರಾಜ್ಯಾಧ್ಯಕ್ಷ ಟಿ.ಎನ್. ರಮೇಶ್, ಕೆಜಿಒ ಸಂಘದ ರಾಜ್ಯಾಧ್ಯಕ್ಷ ಬಿ. ಮನು, ಫೆಡರೇಶನ್ ಆಫ್ ಯೂನಿವರ್ಸಿಟಿ ಎಂಪ್ಲಾಯಿಸ್ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಅರುಣ್ ಕುಮಾರ್, ಕೆಎಸ್ಪಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಕೆ. ಶ್ರೀಕುಮಾರ್ ಮತ್ತಿತರರು ಮಾತನಾಡಿದರು.

                             ನೂತನ ಪದಾಧಿಕಾರಿಗಳು: 

          ತಿರುವನಂತಪುರಂ: ಕೇರಳ ಸೆಕ್ರೆಟರಿಯೇಟ್ ಎಂಪ್ಲಾಯಿಸ್ ಸಂಘದ ರಾಜ್ಯಾಧ್ಯಕ್ಷರಾಗಿ ಆಕಾಶ್ ರವಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಜಯಕುಮಾರ್ ಟಿ.ಐ. ಉಪಾಧ್ಯಕ್ಷರಾಗಿ ಎಸ್. ಸುದರ್ಶನನ್, ಶಿವನ್‍ಪಿಳ್ಳೆ. ಕೆ, ಪಿ.ಕೆ. ಅಜಿತ್ ಕುಮಾರ್, ರಂಜಿತ್. ಎಂ ಮತ್ತು ಕಾರ್ಯದರ್ಶಿಗಳಾಗಿ ಆಶಾ. ಆರ್, ಅಭಿಲಾಷ್ ರವೀಂದ್ರನ್, ಶಶಿಕುಮಾರ್. ಅಜಯ್.ಕೆ ಮತ್ತು ಎಸ್.ಎನ್ ಮತ್ತು ಖಜಾಂಚಿಯಾಗಿ ಹರೀಶ್.ಎಸ್. ನಾಯರ್ ಆಯ್ಕೆಯಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries