HEALTH TIPS

ಬಡ್ಡಿ ದರ ಯಥಾಸ್ಥಿತಿ ಮಾರುಕಟ್ಟೆಯಲ್ಲಿ ಹಣ ಹರಿವು; ತಡೆಗೆ ಸಿಆರ್​ಆರ್ ಕಡಿತ

                 ವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ ಮೂರನೇ ಬಾರಿಗೆ ಬ್ಯಾಂಕ್ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೂ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ ಹೆಚ್ಚುತ್ತಿರುವ ಹಣದುಬ್ಬರ ಪಥದತ್ತ ಗಮನ ನೀಡುವ ಅಗತ್ಯವನ್ನು ಪ್ರತಿಪಾದಿಸಿದೆ.

              ಪ್ರಸ್ತುತ ಇರುವ ಶೇ. 6.5ರಷ್ಟು ರೆಪೋ ದರವನ್ನೇ ಮುಂದುವರಿಸುವುದಕ್ಕೆ ಎಲ್ಲಾ ಎಂಪಿಸಿ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಒಟ್ಟು ಆರು ಎಂಪಿಸಿ ಸದಸ್ಯರ ಪೈಕಿ ಐವರು ಸದಸ್ಯರು ಮಾರುಕಟ್ಟೆಯಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಣ ಪೂರೈಕೆ ಕಡಿತಗೊಳಿಸುವ ನಿಲುವನ್ನು ಮುಂದುವರಿಸುವುದಕ್ಕೆ ಮತ ಹಾಕಿದ್ದಾರೆ.

               ಆದರೆ, ಅನಿರೀಕ್ಷಿತ ಕಮವನ್ನು ಕೈಗೊಂಡಿರುವ ಆರ್​ಬಿಐ, ಬ್ಯಾಂಕುಗಳಿಗೆ ಶೇಕಡಾ 10ರಷ್ಟು ನಗದು ಮೀಸಲು ಅನುಪಾತ (ಸಿಆರ್​ಆರ್) ಹೆಚ್ಚಳ ಘೊಷಿಸಿದೆ. ಇದು ಪ್ರಾಥಮಿಕವಾಗಿ -ಠಿ;2,000 ನೋಟುಗಳ ಹಿಂಪಡೆಯುವಿಕೆ ಯಿಂದಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಹಣದ ಹರಿವನ್ನು ತಡೆಯುವ ನಿಟ್ಟಿನಲ್ಲಿ ಕೈಗೊಂಡ ಪರಿಹಾರ ಕ್ರಮ ಎನ್ನಬಹುದಾಗಿದೆ. ಹೆಚ್ಚಿನ ಮೌಲ್ಯದ ನೋಟುಗಳ ಅಮಾನ್ಯೀಕರಣದ ನಂತರ 2016ರ ನವೆಂಬರ್ 26 ಮತ್ತು 2016ರ ಡಿಸೆಂಬರ್ 10ರ ನಡುವೆ ಪರಿಚಯಿಸಲಾಗಿದ್ದ ಶೇಕಡಾ 100ರಷ್ಟು ಸಿಆರ್​ಆರ್ ಹೆಚ್ಚಳದ ಕ್ರಮವನ್ನು ಇದು ಹೋಲುತ್ತದೆ. ಪ್ರಸ್ತುತ ಸಿಆರ್​ಆರ್ ಹೆಚ್ಚಳದಿಂದಾಗಿ ಅಂದಾಜು -ಠಿ;1 ಟ್ರಿಲಿಯನ್ (ಒಂದು ಲಕ್ಷ ಕೋಟಿ ರೂಪಾಯಿ) ನಗದವನ್ನು ಮಾರುಕಟ್ಟೆಯಿಂದ ಹೊರಹಾಕಬಹುದಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ವ್ಯವಸ್ಥೆಯಲ್ಲಿನ ಒಟ್ಟು ನಗದು ದ್ರವ್ಯತೆಯು ಆಗಸ್ಟ್ 8ರ ಹೊತ್ತಿಗೆ -ಠಿ;3.5 ಟ್ರಿಲಿಯನ್​ಗೆ (ಮೂರೂವರೆ ಲಕ್ಷ ಕೋಟಿ ರೂ.) ಸಮೀಪದಲ್ಲಿದೆ.

                  ನಗದು ದ್ರವ್ಯತೆ ಮಿತಿಮೀರಿದ ಹಿನ್ನೆಲೆಯಲ್ಲಿ ಸಿಆರ್​ಆರ್ ಹೆಚ್ಚಳ ಕ್ರಮವು ಅಗತ್ಯವೆಂದು ಪರಿಗಣಿಸಲಾಗಿದೆ. ಬೆಲೆ ಮತ್ತು ಆರ್ಥಿಕ ಸ್ಥಿರತೆಯ ಹಿತಾಸಕ್ತಿಯಿಂದ ನಾವು ಇದನ್ನು ಅಪೇಕ್ಷಣೀಯವೆಂದು ಪರಿಗಣಿಸಿದ್ದೇವೆ. ಇದು ಹಣದುಬ್ಬರ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಸೆಪ್ಟೆಂಬರ್ 8 ಅಥವಾ ಅದಕ್ಕೂ ಮೊದಲು ಇದನ್ನು ಮರುಪರಿಶೀಲಿಸಲಾಗುವುದು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

              2023-24ನೇ ಹಣಕಾಸು ವರ್ಷದಲ್ಲಿ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 5.1 ರಿಂದ ಶೇಕಡಾ 5.4ಕ್ಕೆ ಎಂಪಿಸಿ ಪರಿಷ್ಕರಿಸಿದೆ. ಸೆಪ್ಟೆಂಬರ್ ತ್ರೖೆಮಾಸಿಕ ಮುನ್ಸೂಚನೆಯನ್ನು 100 ಮೂಲ ಅಂಕ ಹೆಚ್ಚಿಸಿ 6.2 ಎಂದು ಅಂದಾಜಿಸಿದೆ. ಅಲ್ಲದೆ, ಮುಂದಿನ ಹಣಕಾಸು ವರ್ಷದ ಜೂನ್ ತ್ರೖೆಮಾಸಿಕಕ್ಕೆ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 5.2ಕ್ಕೆ ನಿಗದಿಪಡಿಸಿದೆ.

               ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರದಲ್ಲಿ ಇತ್ತೀಚಿನ ಹೆಚ್ಚಳವು ಅಲ್ಪಾವಧಿಯದ್ದಾಗಿರಲಿದೆ ಎಂಬ ನಿರೀಕ್ಷೆಯಿದೆ. ಇಂತಹ ಸಂದರ್ಭಗಳಲ್ಲಿ ನಾವು ಜಾಗರೂಕರಾಗಿರಬೇಕು. ಆಹಾರ ಹಣದುಬ್ಬರದಲ್ಲಿನ ಈ ಹೆಚ್ಚಳವು ಸಾಮಾನ್ಯೀಕರಿಸುವ ಲಕ್ಷಣಗಳನ್ನು ತೋರಿಸಿದರೆ, ನಾವು ಕಾರ್ಯನಿರ್ವಹಿಸಬೇಕಾಗುತ್ತದೆ. ನೀತಿ ಸಾಧನಗಳನ್ನು ನಿಯೋಜಿಸಲು ನಾವು ಅರ್ಜುನನ ಕಣ್ಣುಗಳನ್ನು ಮೀರಿ ಹೋಗಬೇಕಾಗಿದೆ. ಹಣದುಬ್ಬರವನ್ನು ಶೇಕಡಾ 4ರ ಗುರಿಗೆ ಹೊಂದಿಸಲು ಎಂಪಿಸಿ ದೃಢವಾಗಿ ಗಮನಹರಿಸಬೇಕು ಎಂದು ದಾಸ್ ಹೇಳಿದ್ದಾರೆ. ಆರ್​ಬಿಐನ ಅಭಿಪ್ರಾಯವು ವಿಚಿತ್ರವಾಗಿದೆ ಎಂದಿರುವ ಅರ್ಥಶಾಸ್ತ್ರಜ್ಞರು, ಮುಂದಿನ ಆರ್ಥಿಕ ವರ್ಷದವರೆಗೆ ಬಡ್ಡಿ ದರ ಕ್ರಮದಲ್ಲಿ ಯಾವುದೇ ಬದಲಾವಣೆ ಆಗಲಿಕ್ಕಿಲ್ಲ ಎಂದು ಹೇಳಿದ್ದಾರೆ.

2023-24ನೇ ಹಣಕಾಸು ವರ್ಷದವರೆಗೆ ಬಡ್ಡಿ ದರಗಳ ಮೇಲೆ ಆರ್​ಬಿಐ ಯಥಾಸ್ಥಿತಿಯನ್ನು ಮುಂದುವರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಲ್ಲದೆ, 2024-25ನೇ ಹಣಕಾಸು ವರ್ಷದವರೆಗೆ ಬಡ್ಡಿ ದರ ಕಡಿತದ ಸಾಧ್ಯತೆಯಿಲ್ಲ. ದರ ಕಡಿತದ ಸಮಯವು ದೇಶೀಯ ಮೂಲಭೂತ ಅಂಶಗಳು ಹಾಗೂ ಜಾಗತಿಕ ಬಡ್ಡಿದರ ಚಕ್ರದ ತಿರುವು- ಇವೆರಡರ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಅಮೆರಿಕದ ಫೆಡರಲ್ ರಿಸರ್ವ್​ಗಿಂತ ಮುಂಚಿತವಾಗಿ ಬಡ್ಡಿ ದರ ಕಡಿತದ ಚಕ್ರವನ್ನು ಆರ್​ಬಿಐ ಪ್ರಾರಂಭಿಸುವುದು ಸಾಧ್ಯವಿಲ್ಲ ಎಂದು ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ. ಮುಂಗಾರಿನ ಪ್ರಾದೇಶಿಕ ವಿತರಣೆಯ ಅನಿಶ್ಚಿತತೆಗಳು ಹಾಗೂ ಎಲ್ ನಿನೋ ಪರಿಣಾಮದಿಂದಾಗಿ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಆಹಾರ ಹಣದುಬ್ಬರ ಹೆಚ್ಚಾಗುವ ಅಪಾಯಗಳಿವೆ ಎಂದು ಗೋಲ್ಡ್​ಮನ್ ಸ್ಯಾಚ್ಸ್ ಸಂಸ್ಥೆ ಅಂದಾಜಿಸಿದೆ.

                                         ಹಣದುಬ್ಬರ ಸಾಧ್ಯತೆ

               ತರಕಾರಿ ಬೆಲೆ ಹೆಚ್ಚಳ ತಾತ್ಕಾಲಿಕವಾಗಿರುತ್ತದೆ ಮತ್ತು ಇತ್ತೀಚಿನ ಏರಿಕೆಯು ಮುಂಬರುವ ತಿಂಗಳುಗಳಲ್ಲಿ ತೀವ್ರವಾಗಿ ಹಿಮ್ಮುಖವಾಗಬಹುದು ಎಂದು ಕೇಂದ್ರ ಬ್ಯಾಂಕ್ ಹೇಳಿದ್ದರೂ ಧಾನ್ಯಗಳು, ಬೇಳೆಕಾಳುಗಳು ಮತ್ತು ಜಾಗತಿಕ ಸರಕುಗಳ ಬೆಲೆ ಹೆಚ್ಚಳದಿಂದ ಇತರ ಹಣದುಬ್ಬರ ಸಾಧ್ಯತೆಗಳ ಅಪಾಯಗಳನ್ನು ಎತ್ತಿ ತೋರಿಸಿದೆ. ಹಣದುಬ್ಬರ ಮುನ್ಸೂಚನೆಯನ್ನು ಆಗಾಗ್ಗೆ ಬದಲಾಯಿಸದಿರುವ ಆಯ್ಕೆಯ ಬಗ್ಗೆ ಕೂಡ ದಾಸ್ ಮಾತನಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries