HEALTH TIPS

ಕಣ್ಣಿನ ಪೊರೆ ಬಂದರೆ ನೈಸರ್ಗಿಕವಾಗಿ ಸಂಪೂರ್ಣ ಇಲ್ಲವಾಗಿಸಬಹುದೇ?

 ಸಾಮಾನ್ಯವಾಗಿ 40 ವರ್ಷ ದಾಟುತ್ತಿದ್ದ ಹಾಗೆ ಚಾಲೀಸ್ ಎಂಬುವ ಮಾತನ್ನು ನೀವು ಕೇಳಿರಬಹುದು. ಅಂದರೆ 40 ವರ್ಷಕ್ಕೆ ಕಣ್ಣಿನ ಪೊರೆ ಬರುವುದು. ಸಾಮಾನ್ಯವಾಗಿ ವಯಸ್ಸಾಗುತ್ತಿದ್ದ ಹಾಗೆ ಕಣ್ಣಿನಲ್ಲಿ ಪೊರೆ ಉಂಟಾಗಿ ಕಣ್ಣಿನ ದೃಷ್ಟಿ ಮಂದವಾಗುವುದು ಸಹಜ ಆದ್ರೆ ಈಗ ಕಣ್ಣಿನ ಪೊರೆ ಎನ್ನುವುದು ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎನ್ನುವುದು ಸಣ್ಣ ವಯಸ್ಸಿನವರಲ್ಲಿಯೂ ಕೂಡ ಬೇರೆ ಬೇರೆ ಕಾರಣಗಳಿಂದ ಕಣ್ಣಿನ ಪೊರೆ ಉಂಟಾಗಬಹುದು.

ಕಣ್ಣಿನ ಪೊರೆ ವಯಸ್ಸಾದವರಲ್ಲಿ ಮಾತ್ರ ಬರುತ್ತದೆಯೇ!
ಕಣ್ಣಿಗೆ ಪೊರೆ ಬಂದು ಕಣ್ಣಿನ ದೃಷ್ಟಿ ಮಂದವಾಗುವುದು ವಯಸ್ಸಾದವರಲ್ಲಿ ಸಹಜ ಎನ್ನಬಹುದು ಆದರೆ ಇದು ಕೇವಲ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿರುವುದಲ್ಲ ಅಥವಾ ಇದು ದೊಡ್ಡ ಕಾಯಿಲೆಯೂ ಅಲ್ಲ ಮನುಷ್ಯರಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಒಂದು ಕಣ್ಣಿನ ಸಮಸ್ಯೆ ಆಗಿದೆ. ಮಗು 9 ತಿಂಗಳಿಗಿಂತ ಮೊದಲೇ ಹುಟ್ಟಿದರೆ ಅಂದರೆ ಪ್ರೀ ಮೆಚ್ಯೂರ್ಡ್ ಬೇಬಿ ಆಗಿದ್ದರೆ ಕಣ್ಣಿನ ಸಮಸ್ಯೆ ಉಂಟಾಗಬಹುದು. ಅಥವಾ ಕಣ್ಣಿನ ಸಮಸ್ಯೆ ಅನುವಂಶಿಕವಾಗಿಯೂ ಬರಬಹುದು. ದೇಹದ ಯಾವುದೋ ಕಾಯಿಲೆಗೆ ಔಷಧಿ ತೆಗೆದುಕೊಂಡು ಆ ಔಷಧೀಯ ರಿಯಾಕ್ಷನ್ ಮೂಲಕವೂ ಕಣ್ಣಿನ ದೃಷ್ಟಿ ಮಂದಾಗಬಹುದು. ಹಾಗಾಗಿ ಕಣ್ಣಿನ ಪೊರೆ ಎನ್ನುವುದು ಕೇವಲ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಮಸ್ಯೆ ಅಲ್ಲ.

ಚಿಕಿತ್ಸೆಯ ನಂತರವೂ ಕಣ್ಣಿನ ಪೊರೆ ಮತ್ತೆ ಬರುತ್ತದೆಯೇ?

ಕಣ್ಣಿನ ಪೊರೆ ಬಂದರೆ ಆರಂಭಿಕ ಹಂತದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ ಕೃತಕ ಮಸೂರವನ್ನು ಬಳಸಿದರೆ ಮತ್ತೆ ಕಣ್ಣಿನ ಪೊರೆ ಬರುವುದಿಲ್ಲ ಕಣ್ಣಿನ ದೃಷ್ಟಿ ಮಂದವಾಗುವುದಿಲ್ಲ. ಶಸ್ತ್ರ ಚಿಕಿತ್ಸೆ ಮಾಡಿಸಿ ಎಲ್ ಓ ಎಲ್ ಅಥವಾ ಕೃತಕ ಮಸೂರವನ್ನು ಬಳಸಲಾಗುತ್ತದೆ. ಇದು ಕಣ್ಣಿನ ಪೊರೆ ಮತ್ತೆ ಬರೆದಂತೆ ತಡೆಗಟ್ಟು ತಲೆ ಮಾಡಿಸಿಕೊಂಡ ನಂತರ ಮತ್ತೆ ಕಣ್ಣಿನ ಪೊರೆ ಬರುವುದಿಲ್ಲ.

ಒಂದು ಕಣ್ಣಿನಿಂದ ಇನ್ನೊಂದು ಕಣ್ಣಿಗೆ ಪೊರೆ ಹರಡುವಿಕೆ
ಕಣ್ಣಿನಲ್ಲಿರುವ ಪೊರೆಯಿಂದ ಕಣ್ಣಿನ ದೃಷ್ಟಿ ಮಂದವಾಗುತ್ತದೆ ಆದರೆ ಒಂದು ಕಣ್ಣು ಸರಿಯಾಗಿ ಕಾಣಿಸದೆ ಇದ್ದಾಗ ಮತ್ತೊಂದು ಕಣ್ಣಿಗೂ ಕೂಡ ಅದು ಹರಡುತ್ತದೆ ಎನ್ನುವುದು ಸುಳ್ಳು. ಯಾಕೆಂದರೆ ಕಣ್ಣಿನ ಪೊರೆ ಎನ್ನುವುದು ಸಾಂಕ್ರಾಮಿಕ ರೋಗವಲ್ಲ. ಆದರೆ ಒಂದು ಕಣ್ಣಿಗೆ ಪೊರೆ ಬಂದಾಗ ಅದನ್ನು ಹಾಗೆಯೇ ಬಿಟ್ಟರೆ ನಂತರ ಇನ್ನೊಂದು ಕಣ್ಣಿಗೂ ಕೂಡ ಪೊರೆ ಬರುವುದು ಒಂದು ಸಹಜವಾದ ಪ್ರಕ್ರಿಯೆ ಆಗಿದೆ.

ಕಣ್ಣಿಗೆ ಹಾಕುವ ಡ್ರಾಪ್ಸ್ ಕಣ್ಣಿನ ಪೊರೆಯನ್ನು ಸರಿಸುತ್ತದೆ
ಕಣ್ಣಿಗೆ ಆಗಾಗ ಡ್ರಾಪ್ಸ್ ಹಾಕುವುದರ ಮೂಲಕ ಕಣ್ಣಿನ ಪೊರೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಸೂರ್ಯನ ಅತಿಯಾದ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಆರೋಗ್ಯಕರವಾದ ಆಹಾರ ಸೇವಿಸುವುದು ಹಾಗೂ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು ಇದರಿಂದ ಕಣ್ಣಿಗೆ ಪೊರೆ ಬರದೇ ಇರುವಂತೆ ನೋಡಿಕೊಳ್ಳಬಹುದು ಆದರೆ ಕಣ್ಣಿಗೆ ಪೊರೆ ಬಂದರೆ ಅದನ್ನು ಕೇವಲ ಕಣ್ಣಿಗೆ ಬಿಡುವ ಡ್ರಾಪ್ಸ್ ನಿಂದ ಸರಿಪಡಿಸಲು ಸಾಧ್ಯವಿಲ್ಲ.

ಕಣ್ಣಿನ ಶಸ್ತ್ರ ಚಿಕಿತ್ಸೆ ಅಪಾಯಕಾರಿಯೇ
ಈವರೆಗೆ ನಡೆಸಿರುವ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಫಲವಾಗಿರುವ ಸಂಖ್ಯೆ ಬಹಳ ಕಡಿಮೆ. ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಿ ಕಣ್ಣಿನಲ್ಲಿ ಇರುವ ಪೊರೆಯನ್ನು ಸರಿಸಿ ದೃಷ್ಟಿ ಸರಿಯಾಗಿ ಆಗುವಂತೆ ಮಾಡುವುದು ಬಹಳ ಸಹಜವಾದ ಪ್ರಕ್ರಿಯೆ ಆಗಿದೆ. ಶಸ್ತ್ರಚಿಕಿತ್ಸೆಯನ್ನು ಮಾಡಿ ಕಣ್ಣಿಗೆ ಲೆನ್ಸ್ ಹಾಕಲಾಗುತ್ತಿದೆ ಇದರಿಂದ ನಿಮ್ಮ ದೃಷ್ಟಿ ಸರಿಯಾಗುವಂತೆ ಮಾಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಷಯ ಅಂದರೆ ನೀವು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವದಿದ್ದರೆ ಅನುಭವ ಹೊಂದಿರುವ ವೈದ್ಯರ ಬಳಿ ಉತ್ತಮ ಕಣ್ಣಿನ ಆಸ್ಪತ್ರೆಯಲ್ಲಿಗೆ ಮಾಡಿಸಿಕೊಂಡರೆ ಒಳ್ಳೆಯದು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೂ ಮೊದಲು ನಿಮ್ಮ ವೈದ್ಯರಿಂದ ಆಪ್ತ ಸಲಹೆಯನ್ನು ತೆಗೆದುಕೊಂಡು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳಿ.

ಚಿಕಿತ್ಸೆಯಿಂದ ಕಣ್ಣಿನ ಪೊರೆ ಹೋಗಲಾಡಿಸಬಹುದೆ?
ಖಂಡಿತ ಇಲ್ಲ. ಕಣ್ಣಿಗೆ ಪೊರೆ ಬಾರದೆ ಇರುವ ಹಾಗೆ ಚಿಕ್ಕ ವಯಸ್ಸಿನಿಂದಲೂ ಮಕ್ಕಳಿಗೆ ಆರೋಗ್ಯಕರವಾದ ಆಹಾರವನ್ನು ಕೊಡುವುದು, ಜೀವನ ಶೈಲಿಯನ್ನು ಉತ್ತಮಗೊಳಿಸುವುದು, ಕಣ್ಣಿಗೆ ತಂಪಾಗಿಸುವ ಸೊಪ್ಪು ಹಸಿ ತರಕಾರಿಗಳನ್ನು ಸೇವಿಸುವುದರ ಮೂಲಕ ಕಣ್ಣಿಗೆ ಪೊರೆ ಬರದಂತೆ ತಡೆಗಟ್ಟಬಹುದು. ಒಮ್ಮೆ ಕಣ್ಣಿಗೆ ಪೊರೆ ಬಂದ ನಂತರ ಕಣ್ಣಿನ ದೃಷ್ಟಿ ಸರಿ ಹೋಗಲು ನೈಸರ್ಗಿಕ ಮಾರ್ಗಗಳು ಇಲ್ಲ. ಕಣ್ಣಿನಲ್ಲಿ ಇರುವ ಪೊರೆಯನ್ನು ತೆಗೆಯಲು ಏಕೈಕ ಮಾರ್ಗ ಅಂದರೆ ಶಸ್ತ್ರಚಿಕಿತ್ಸೆ.

ಕಣ್ಣಿಗೆ ಬರುವ ಪೊರೆಯನ್ನು ತಡೆಗಟ್ಟಬಹುದೇ?
ಸಾಮಾನ್ಯವಾಗಿ ವಯಸ್ಸಾದ ನಂತರ ಕಣ್ಣಿನಲ್ಲಿ ಮಂದಗತಿಯಾಗಿ ದೃಷ್ಟಿ ಹೋಗಲು ಶುರುವಾಗುತ್ತದೆ ಅಂದರೆ ಕಣ್ಣಿಗೆ ಪೊರೆ ಬರಲು ಶುರುವಾಗುತ್ತದೆ ಅಥವಾ ಮಕ್ಕಳಲ್ಲಿ ಇತರ ಕಾಯಿಲೆಗಳಿಂದಾಗಿಯೂ ಕೂಡ ಸಾಧ್ಯತೆ ಇದೆ. ಹಾಗಾಗಿ ಕಣ್ಣಿಗೆ ಬರುವ ಪೊರೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ ಆದರೆ ಸರಿಯಾದ ಜೀವನ ಕ್ರಮ ಅಳವಡಿಸಿಕೊಳ್ಳುವುದು ಉತ್ತಮವಾದ ಆಹಾರ ಸೇವಿಸುವುದು, ಕಣ್ಣಿಗೆ ಯು ವಿ ಕಿರಣಗಳು ಹೆಚ್ಚು ಎಫೆಕ್ಟ್ ಮಾಡದಂತೆ ನೋಡಿಕೊಳ್ಳುವುದು ಧೂಮಪಾನ ತ್ಯಜಿಸುವುದು, ಕಣ್ಣಿಗೆ ಆಗಾಗ ತಂಪು ಮಾಡುವುದು ಇಂತಹ ಕೆಲವು ಆರೋಗ್ಯಕರ ಕ್ರಮಗಳಿಂದ ಕಣ್ಣಿನಲ್ಲಿ ಪೋರೆ ಬಾರದೆ ಇರುವ ಹಾಗೆ ಕಾಪಾಡಿಕೊಳ್ಳಬಹುದು. ಇದರ ಜೊತೆಗೆ ಕಣ್ಣಿನ ನಿಯಮಿತವಾದ ತಪಾಸಣೆ, ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಬಹಳ ಮುಖ್ಯ.

ಇನ್ನು ಕಣ್ಣಿಗೆ ಪೊರೆ ಬಂದಾಗ ಎಲ್ಲರೂ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗುವುದಿಲ್ಲ ಅದರ ಬದಲು ಕನ್ನಡಕವನ್ನು ಧರಿಸಬಹುದು. ಕಣ್ಣಿನಲ್ಲಿ ಎಷ್ಟು ದೃಷ್ಟಿ ಕಡಿಮೆಯಾಗಿದೆ ಎಂಬುದನ್ನು ತಪಾಸಣೆ ಮಾಡಿ ತಿಳಿದುಕೊಂಡು ಕನ್ನಡಕ ಬಳಸಬಹುದು. ಬಿಸಿಲಿಗೆ ಹೊರಗಡೆ ಹೋಗುವಾಗ ಯು ವಿ ಪ್ರೊಟೆಕ್ಟೆಡ್ ಗ್ಲಾಸ್ ಕಣ್ಣಿಗೆ ಧರಿಸಿದರೆ ಉತ್ತಮ. ಅದೇ ರೀತಿ ಕಂಪ್ಯೂಟರ್ ಮುಂದೆ ಕುಳಿತು ಹೆಚ್ಚು ಸಮಯ ಕೆಲಸ ಮಾಡುವವರಾಗಿದ್ದರೆ ಕಣ್ಣಿಗೆ ಆಂಟಿ ಗ್ಲೇರ್ ಕನ್ನಡಕವನ್ನು ಕೂಡ ಧರಿಸಬಹುದು. ನಮಗೆ ಬರುವ ಯಾವುದೇ ಅನಾರೋಗ್ಯವನ್ನು ನಮ್ಮ ಆರೋಗ್ಯಕರ ಜೀವನ ಕ್ರಮ ಹಾಗೂ ಆಹಾರಗಳು ನಿಯಂತ್ರಣದಲ್ಲಿ ಇಡಬಹುದು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries