ಕಣ್ಣೂರು: ಎರಡು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಒಡಿಶಾ ಮೂಲದ ಸರ್ವೇಶ್ ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ತಾನೊಬ್ಬನೇ ಕಲ್ಲು ಎಸೆದಿರುವುದಾಗಿ ಆತ ಹೇಳಿಕೆ ನೀಡಿದ್ದಾನೆ.
25 ವರ್ಷದವನಂತೆ ಕಾಣುವ ಈತ ಕಳೆದ ಹತ್ತು ವರ್ಷಗಳಿಂದ ಕಣ್ಣೂರಿನಲ್ಲಿ ನೆಲೆಸಿದ್ದಾನೆ. ಚೈನ್ ರಿಂಗ್ ಕಾರ್ಮಿಕನಾಗಿದ್ದಾನೆ. ಕಳೆದ ಭಾನುವಾರ ನೇತ್ರಾವತಿ ಎಕ್ಸ್‍ಪ್ರೆಸ್ ಮತ್ತು ಚೆನ್ನೈ ಸೂಪರ್‍ಫಾಸ್ಟ್ ಮೇಲೆ ನಿಮಿಷಗಳ ಅಂತರದಲ್ಲಿ ಕಲ್ಲು ತೂರಾಟ ನಡೆಸಿದ್ದ. ಎರಡು ರೈಲುಗಳಿಗೆ ಒಂದೇ ವ್ಯಕ್ತಿ ಕಲ್ಲು ತೂರಾಟ ನಡೆಸಿರುವ ಬಗ್ಗೆ ತನಿಖಾ ತಂಡ ಈ ಮೊದಲೇ ಅನುಮಾನ ವ್ಯಕ್ತಪಡಿಸಿತ್ತು.
ಮೊದಲ ಹಂತದಲ್ಲಿ ರೈಲ್ವೇ ಸುಮಾರು ನಾಲ್ವರನ್ನು ಬಂಧಿಸಿತ್ತು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ರೈಲ್ವೇ ಮತ್ತು ಪೋಲೀಸರು ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಸುಮಾರು 200 ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗಿದೆ. ಕಲ್ಲು ತೂರಾಟದ ವೇಳೆ ಆರೋಪಿ ಮದ್ಯದ ಅಮಲಿನಲ್ಲಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.

.webp)
