ಕಾಸರಗೋಡು: ಮುಳಿಯಾರ್ ಪಂಚಾಯಿತಿಯ ಬೋವಿಕ್ಕಾನ ಸನಿಹದ ಕಾನತ್ತೂರು ಪಯೋಲ ಪ್ರದೇಶದಲ್ಲಿ ಚಿರತೆ ಕಂಡುಬಂದಿರುವ ಬಗ್ಗೆ ವದಂತಿ ಹರಡಿದ್ದು, ಈ ಪ್ರದೇಶದ ಜನರಲ್ಲಿ ಆತಂಕ್ಕೆ ಕಾರಣವಾಗಿದೆ. ಚಿರತೆಯನ್ನು ಹೋಲುವ ಪ್ರಾಣಿಯೊಂದು ರಸ್ತೆ ಅಡ್ಡದಾಟಿ ಸಂಚರಿಸಿರುವುದಾಗಿ ಈ ಹಾದಿಯಾಗಿ ವಾಹನದಲ್ಲಿ ಸಂಚರಿಸಿದವರು ತಿಳಿಸಿದ್ದಾರೆ. ಈಗಾಗಲೇ ಕಾನತ್ತೂರು ಆಸುಪಾಸು ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಕಾನತ್ತೂರು ಪ್ರದೇಶದ ಜನತೆಗೆ ಪ್ರಸಕ್ತ ಚಿರತೆ ಓಡಾಟದ ಬಗೆಗಿನ ವದಂತಿ ಮತ್ತಷ್ಟು ಆತಂಕ್ಕೆ ಕಾರಣವಾಗಿದೆ.

