ಬದಿಯಡ್ಕ: ಮವ್ವಾರು ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. “ಭಾರತದ ಸ್ವಾತಂತ್ರ್ಯ ಸಂಗ್ರಾಮ" ಮತ್ತು ರಾಮಾಯಣದಿಂದ ಆಯ್ದ ಪ್ರಶ್ನೆಗಳನ್ನು ಆಧರಿಸಿ ರಸಪ್ರಶ್ನೆ ನಡೆಯಿತು. ಸೌಮ್ಯಲತಾ ಕುರುಮುಜ್ಜಿ, ಸೌಮ್ಯಲತಾ ಕಾರ್ಲೆ, ಸಂ|ಧ್ಯಾ ಕೊರೆಕ್ಕಾನ ತೀರ್ಪುಗಾರರಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಸಮೀಪದ ವಿದ್ಯಾಲಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ವಿಜೇತರಿಗೆ ಗ್ರಂಥಾಲಯದ ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ ಎಡೆಪ್ಪಾಡಿ ಬಹುಮಾನ ವಿತರಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸೀತಾರಾಮ ಭಟ್, ಗ್ರಂಥಪಾಲಕ ಬಾಲಚಂದ್ರ ಭಟ್ ಕೋಳಿಕ್ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


