ಕಾಸರಗೋಡು: ಅದಾಲತ್ ಅಂಗವಾಗಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಪನಯಾಲ್ ಗ್ರಮಾಧಿಕಾರಿ ಕಚೇರಿಗೆ ಭೇಟಿ ನೀಡಿದರು. ಗ್ರಾಮ ಕಚೇರಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ಅವರು ಪಂಚಾಯಿತಿಯ ಪಾಡಶೇಖರ ಸಮಿತಿಗೆ ಅಗತ್ಯ ಭೂಮಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಬಳಿಕ ಬಟತ್ತೂರು ದೇವನ್‍ಪೊಡಿಚ್ಚಪ್ಪಾರದಲ್ಲಿ ಕಾರಾಗೃಹ ನಿರ್ಮಾಣಕ್ಕಾಗಿ ಮಂಜೂರಾದ ಜಾಗಕ್ಕೆ ಭೇಟಿ ನೀಡಿದರು. ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮದ್, ಹೊಜದುರ್ಗ ತಹಸೀಲ್ದಾರ್ ಎನ್.ಮಣಿರಾಜ್, ಗ್ರಾಮಾಧಿಕಾರಿ ಕೆ.ರಾಜನ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ವಿ.ಜಯಶ್ರೀ, ಟಿ.ಶೋಭನಾ, ಎಂ.ಪಿ.ಜಯಶ್ರೀ, ಎ.ಮಣಿಕಂಠನ್, ಪಾಡಶೇಖರ ಸಮಿತಿ ಅಧ್ಯಕ್ಷ ಕುಞÂಕಣ್ಣನ್, ಕಾರ್ಯದರ್ಶಿ ಬಾಲಕೃಷ್ಣನ್ ನಾಯರ್, ಗ್ರಾಮಾಧಿಕಾರಿ ಕಚೇರಿ ನೌಕರರಾದ ದೀಪಾ, ಕವಿತಾ, ಉಣ್ಣಿ, ಸುಜಿತ್ ಜಿಲ್ಲಾಧಿಕಾರಿ ಜತೆಗಿದ್ದರು.


