ಬದಿಯಡ್ಕದಲ್ಲಿ ಧಾರ್ಮಿಕ ಸಭೆ; ಕು.ಹಾರಿಕಾ ಮಂಜುನಾಥ್ ಭಾಷಣ
ಬದಿಯಡ್ಕ: ವಿಶ್ವಹಿಂದೂ ಪರಿಷತ್ ಮಾತೃಶಕ್ತಿ ಬದಿಯಡ್ಕ ಪ್ರಖಂಡ ಇದರ ಆಶ್ರಯದಲ್ಲಿ 6ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಾಳೆ(ಆ. 25) ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಜರಗಲಿದೆ. ಬೆಳಗ್ಗೆ 9 ಗಂಟೆಯಿಂದ ಶಬರಿಗಿರಿ ಮಹಿಳಾ ಭಜನಾ ಸಂಘದವರಿಂದ, ಭಜನೆ, 10 ರಿಂದ ಪೂಜೆ ಆರಂಭ, 11.45 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯುವ ವಾಗ್ಮಿ ಕು.ಹಾರಿಕಾ ಮಂಜುನಾಥ್ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಮಾತೃಶಕ್ತಿ ಪ್ರಖಂಡ ಅಧ್ಯಕ್ಷೆ ಜಯಂತಿ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸುವರು. ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಮುಖಂಡ ಹರಿಪ್ರಸಾದ ಪುತ್ರಕಳ, ದುರ್ಗಾವಾಹಿನಿ ಜಿಲ್ಲಾ ಸಹಸಂಚಾಲಕಿ ನಂದಿನಿ ಮುನಿಯೂರು ಶುಭಾಶಂಸನೆಗೈಯ್ಯುವರು.
ಉಬ್ರಂಗಳ ಶ್ರೀ ಮಹಾದೇವ ಪಾರ್ವತೀ ದೇವಸ್ಥಾನ :
ಬದಿಯಡ್ಕ: ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತೀ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಮಾತೃಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 9.30ಕ್ಕೆ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆ ಆರಂಭವಾಗಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನದಾನ ಜರಗಲಿದೆ.
ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನ :
ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಾಳೆ(ಆ.25) ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಜರಗಲಿರುವುದು. ಪೂಜೆಯು ಬೆಳಗ್ಗೆ 10 ರಿಂದ ಆರಂಭಗೊಳ್ಳಲಿರುವುದು.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನೆಕ್ರಾಜೆ :
ಮುಳ್ಳೇರಿಯ: ಪ್ರತಿ ವರ್ಷದಂತೆ ನಾಳೆ(ಆ.25) ನೆಕ್ರಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಯಲಿರುವುದು. ಬೆಳಗ್ಗೆ 10 ಕ್ಕೆ ಪೂಜೆ ಆರಂಭವಾಗಲಿರುವುದು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.

.jpeg)
