HEALTH TIPS

ಸೆ.17ಕ್ಕೆ ಸೀತಾಂಗೋಳಿಯಲ್ಲಿ ವಿಶ್ವಕರ್ಮ ಕಬ್ಬಿಣ ಕರಕುಶಲ ಸಂಘದ 5ನೇ ವಾರ್ಷಿಕೋತ್ಸವ: ವಿಶ್ವಕರ್ಮ ಪೂಜೆ

               ಕುಂಬಳೆ:  ಶ್ರೀವಿಶ್ವಕರ್ಮ ಕಬ್ಬಿಣ ಕರಕುಶಲ ಸಂಘ ಕಾಸರಗೋಡು ಇದರ ಆಶ್ರಯದಲ್ಲಿ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವಕರ್ಮ ಪೂಜೆ ಸೆ.17ಕ್ಕೆ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಜರಗಲಿದೆ. ಇದರ ಆಮಂತ್ರಣಾ ಪತ್ರಿಕೆ ಬಿಡುಗಡೆ ಹಾಗೂ ಸಿದ್ಧತಾ ಸಭೆ ಸೀತಾಂಗೋಳಿಯಲ್ಲಿ ಜರಗಿತು. ಶ್ರೀದೇವಿ ಮಂದಿರದ ಅಧ್ಯಕ್ಷ ಜಯಂತ ಪಾಟಾಳಿ ಅವರಿಗೆ ಸಂಘದ ಅಧ್ಯಕ್ಷ ಕೇಶವ ಆಚಾರ್ಯ ಆಮಂತ್ರಣ ನೀಡುವ ಮೂಲಕ ಪತ್ರಿಕೆ ಬಿಡುಗಡೆಗೊಳಿಸಿದರು. ಸಂಘಟನೆಯ ಪದಾಧಿಕಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. 

            ಸೆ.17 ರಂದು ಪುರೋಹಿತ ಕುಂಬಳೆ ಜನಾರ್ದನ ಆಚಾರ್ಯರ ಪೌರೋಹಿತ್ಯದಲ್ಲಿ ವಿಶ್ವಕರ್ಮ ಪೂಜೆ ಜರಗಲಿದೆ. ಇದರ ಅಂಗವಾಗಿ ಬೆಳಗ್ಗೆ 10 ಕ್ಕೆ  ಶ್ರೀದುರ್ಗಾಪರಮೇಶ್ವರಿ ಭಜನಾ ಸಂಘ ದೈಹಿತ್ಲು ಪಡ್ರೆ ಅವರಿಂದ ಭಜನಾ ಸೇವೆ ಬಳಿಕ 11 ಕ್ಕೆ  ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಘದ ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಜರಗಲಿದೆ. ಕೇಶವ ಆಚಾರ್ಯ ವಾಣಿನಗರ ಅವರ ಅಧ್ಯಕ್ಷತೆಯಲ್ಲಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ವಿಜೇತ ತೇಜಸ್ ಆಚಾರ್ಯ, ದ್ವಿತೀಯ ರ್ಯಾಂಕ್ ಗಳಿಸಿದ ಧನ್ಯಶ್ರೀ ಆಚಾರ್ಯ, ಕೇರಳ ಶಾಲಾ ಕಲೋತ್ಸವದಲ್ಲಿ ರಾಜ್ಯ ಮಟ್ಟದ ತಬಲ ವಾದನದಲ್ಲಿ ಎಗ್ರೆಡ್ ಗಳಿಸಿದ ಪ್ರಜ್ವಲ್ ಎಸ್.ಕೆ.ಆಚಾರ್ಯ, ಚಿತ್ರಕಲೆಯಲ್ಲಿ ಎಗ್ರೆಡ್ ಗಳಿಸಿದ ಶ್ರಾವಣ್ ಕುಮಾರ್, ಭರತನಾಟ್ಯ ಜ್ಯೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಎಗ್ರೆಡ್ ಗಳಿಸಿದ ಪ್ರತಿಭಾ ಎಸ್.ಕೆ, ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ 98 ಶೇ. ಅಂಕ ಗಳಿಸಿದ ಪ್ರಮೋದ್ ರಾಜ್ ಎಸ್.ಕೆ.ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಸಭಾ ಕಾರ್ಯಕ್ರಮದಲ್ಲಿ ಮಂಜೇಶ್ಚರ ಇ.ಒ. ಅರ್ಜುನ್, ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಕೆ.ಪಿ.ಆನಿಲ್ ಕುಮಾರ್, ಪತ್ರಕರ್ತ ಜಯ ಮಣಿಯಂಪಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರವೀಂದ್ರ ಆಚಾರ್ಯ ಮುಳ್ಳೇರಿಯ ಉಪಸ್ಥಿತರಿರುವರು. ಬಳಿಕ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾ ಸಂಘ ಅಡೂರು ಕುರ್ನೂರು ಅವರಿಂದ ಇಂದ್ರಜಿತು ಕಾಳಗ ಎಂಬ ಯಕ್ಷಗಾನ ತಾಳಮದ್ದಲೆ ಜರಗಲಿದೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries