ಬದಿಯಡ್ಕ: ಗ್ರಾಮವಿಕಾಸ ಸಮಿತಿ ಉಬ್ರಂಗಳ ಇದರ ಆಶ್ರಯದಲ್ಲಿ ಉಬ್ರಂಗಳ ಬಡಗು ಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾ ಸನ್ನಿಧಿಯ ವಠಾರದಲ್ಲಿ ಶ್ರೀ ಭಾರ್ಗವರಾಮ ಬಾಲಗೋಕುಲ ಅಕ್ಟೋಬರ್ 1ರಂದು ಭಾನುವಾರ ಬೆಳಗ್ಗೆ 10 ಕ್ಕೆ ಶುಭಾರಂಭಗೊಳ್ಳಲಿದೆ. ಉಬ್ರಂಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ಅಗಲ್ಪಾಡಿ ಶಾಲಾ ಅಧ್ಯಾಪಕ ಹರಿನಾರಾಯಣ ಮಾಸ್ತರ್ ಉದ್ಘಾಟಿಸಲಿದ್ದಾರೆ. ಸಾಮೂಹಿಕ ನಗರಸಭಾ ಜಿಲ್ಲಾ ಪ್ರಮುಖ್ ವಿ.ಕೆ.ಸತೀಶನ್ ಮಾಸ್ತರ್ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಾಲಗೋಕುಲ ಜಿಲ್ಲಾಧ್ಯಕ್ಷ ನಾರಾಯಣ ಮಾಸ್ತರ್ ಬಿಡುಗಡೆ ಗೊಳಿಸಿದರು.

.jpg)
