ಕಾಸರಗೋಡು: ಉದುಮ ಅರಮಂಗಾನ ಎಂಬಲ್ಲಿ ತಾಯಿ ಮತ್ತು ಪುತ್ರಿಯ ಮೃತದೇಹ ಮನೆ ಸನಿಹದ ಬಾವಿಯಲ್ಲಿ ಪತ್ತೆಯಾಗಿದೆ. ಅರಮಂಗಾನ ನಿವಾಸಿ ತಾಜುದ್ದೀನ್ ಎಂಬವರ ಪತ್ನಿ ರೂಬಿನಾ(33)ಹಾಗೂ ಈಕೆಯ ಪುತ್ರಿ ಅನಾನಾ ಮರಿಯಾ(5) ಮೃತಪಟ್ಟವರು.
ಬಾವಿಗೆ ಹಾರಿ ಆತ್ಮಹತ್ಯೆಗೈದಿರಬೇಕೆಂದು ಸಂಶಯಿಸಲಾಗಿದೆ.
ಶುಕ್ರವಾರ ಬೆಳಗ್ಗಿನಿಂದ ತಾಯಿ ಮತ್ತು ಪುತ್ರಿ ನಾಪತ್ತೆಯಾಗಿದ್ದು, ಹುಡುಕಾಡುವ ಮಧ್ಯೆ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ರೂಬಿನಾ ಪತಿ ತಾಜುದ್ದೀನ್ ವಿದೇಶದಲ್ಲಿ ಕೆಲಸದಲ್ಲಿದ್ದಾರೆ. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.