HEALTH TIPS

ಅವಳಿಡಂ ಯುವತಿ ಕ್ಲಬ್‍ನ ವತಿಯಿಂದ ಓಣಂ ಆಚರಣೆ

             ಬದಿಯಡ್ಕ: ಅವಳಿಡಂ ಯುವತಿ ಕ್ಲಬ್ಬಿನ ವತಿಯಿಂದ ಬದಿಯಡ್ಕ ಗ್ರಾಮಪಂಚಾಯಿತಿ ವಯೋಜನರ ಹಗಲು ಮನೆಯಲ್ಲಿ ಓಣಂ ಆಚರಣೆ ಮತ್ತು ಹಿರಿಯನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಜರಗಿತು. 

           ಕೇರಳ ಯುವಜನ ಬೋರ್ಡಿನ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ಬದಿಯಡ್ಕ ಪಂಚಾಯಿತಿ ಆಶಾ ಕಾರ್ಯಕರ್ತೆಯರ ಸಂಘಟನೆಯಾದ ಅವಳಿಡಂ ಯುವತಿ ಕ್ಲಬ್ಬಿನ ಅಧ್ಯಕ್ಷೆ ಸಾಜಿದಾ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಾರಡ್ಕ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಶುಭಹಾರೈಸಿದರು. ಜಾತಿ ಮತ ಭೇದವಿಲ್ಲದೇ ಆಚರಿಸಲ್ಪಡುವ ಓಣಂ ಹಬ್ಬವು ಸಮಾಜದಲ್ಲಿ ಸಾಮರಸ್ಯವನ್ನುಂಟುಮಾಡುತ್ತದೆ ಎಂದರು.

       ಗ್ರಾಮಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್, ಕಾರ್ಯದರ್ಶಿ ವಿನೋದ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಾಜರಿದ್ದ ಹಿರಿಯ ನಾಗರಿಕರನ್ನು ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಕ್ಲಬ್ಬಿನ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಹಿರಿಯನಾಗರಿಕÀ ವೇದಿಕೆಯ ಅಧ್ಯಕ್ಷ ಪೆರ್ಮುಖ ಈಶ್ವರ ಭಟ್ ಅವರು, ಕೋವಿಡ್ ಸಮಯದಲ್ಲಿ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ಪ್ರವೃತ್ತಿಯನ್ನು ಮೆರೆದ ಕ್ಲಬ್ಬಿನ ಕಾರ್ಯಕರ್ತೆಯರ ಸೇವಾ ಮನೋಭಾವ ಶ್ಲಾಘನೀಯವಾಗಿದೆ ಎಂದರು. ಕ್ಲಬ್ಬಿನ ಸದಸ್ಯೆಯರಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಓಣಂ ಔತಣ ಕೂಟ ಜರುಗಿತು. ಕಾರ್ಯದರ್ಶಿ ಶಾಲಿನಿ ಸ್ವಾಗತಿಸಿ, ಲೀಲಾವತಿ ಕನಕಪಾಡಿ ವಂದಿಸಿದರು.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries